ಚಳ್ಳಕೆರೆ ನ್ಯೂಸ್ :
ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಕ್ತರ
ದಂಡು
ನಾಯಕನಹಟ್ಟಿ
ಪಟ್ಟಣದ ಮಧ್ಯ ಕರ್ನಾಟಕದ ಕಾಯಕಯೋಗಿ ಶ್ರೀ ಗುರು
ತಿಪ್ಪೇರುದ್ರಸ್ವಾಮಿಯ ದೇವಸ್ಥಾನಕ್ಕೆ ಜಿಲ್ಲೆಯ ವಿವಿಧ
ಮೂಲೆಗಳಿಂದ ನೂರಾರು ಭಕ್ತರು ಆಗಮಿಸಿ ದರ್ಶನವನ್ನು
ಪಡೆದರು.
ಜಿಲ್ಲೆಯಲ್ಲಿ ಉತ್ತಮ ಮಳೆ ಹಾಗೂ ಇಂದು ಸೋಮವಾರ ರಜೆ
ದಿನ ಆಗಿದ್ದರಿಂದ ಬೆಳಗ್ಗೆಯಿಂದಲೇ ನೂರಾರು ಭಕ್ತರು ಶ್ರೀ ಗುರು
ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಹೂವು ಹಣ್ಣು ಕಾಯಿ
ಕೊಟ್ಟು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನವನ್ನು ಪಡೆದು
ಕಾಪಾಡು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಎಂದರು.