ಚಳ್ಳಕೆರೆ ನ್ಯೂಸ್ : ಜೂನ್ 5 ರಂದು ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಚಳ್ಳಕೆರೆ ತಾಲೂಕಿಗೆ ಟಾಪರ್ ಆಗಿ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಹೊರಹೊಮ್ಮಿದ್ದಾರೆ

ಕಳೆದ ಮೇ.9 ರಂದು ರಾಜ್ಯಾದ್ಯಂತ
ಎಸ್ ಎಸ್ ಎಲ್ ಸಿ ಫಲಿತಾಂಶ ಹೊರ ಬಿದ್ದಿತ್ತು.

ಅದರಂತೆ ಚಳ್ಳಕೆರೆ ತಾಲೂಕಿನಲ್ಲಿ ಹೊಂಗಿರಣ ಇಂಟರ್ನ್ಯಾಷನಲ್ಆಂಗ್ಲ ಮಾಧ್ಯಮ ಶಾಲೆಗೆ ಶೇಕಡ ನೂರಕ್ಕೆ ನೂರರಷ್ಟು
ಫಲಿತಾಂಶ ಸಂದು ತಾಲೂಕಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು

ಆದರೆ ಅವಿರತ ಸಾಧನೆಗೈದ ವಿದ್ಯಾರ್ಥಿಗಳು ಮತ್ತೆ ಮರು ಮೌಲ್ಯಮಾಪನ ಫಲಿತಾಂಶಕ್ಕೆ ಹಾಕಿದ್ದರು, ಇನ್ನೂ ಇಲಾಖೆಯಲ್ಲಿ ಮರು ಮೌಲ್ಯಮಾಪನದಲ್ಲಿ ಸುಮಾರು 4 ರಿಂದ 5 ಅಂಕಗಳು ಹೆಚ್ಚಳವಾಗಿ ಈಡೀ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಮೊದಲಿಗರಾಗಿದ್ದಾರೆ.

ವಿದ್ಯಾರ್ಥಿನಿ ನಂದಿತಾ- 617, ಸುಮುಖ್ -617, ಅಂಕಗಳನ್ನು ಪಡೆಯುವ ಮೂಲಕ ಸಾಧನೆಯ ಹಾದಿಯಲ್ಲಿ ಇದ್ದಾರೆ.

ಕೇವಲ ಮೂರು ವರ್ಷಗಳಲ್ಲಿ ಅತ್ಯುತ್ತಮ ಸಾಧನೆಗೈಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ತಾಲ್ಲೂಕಿನಲ್ಲಿ ಮೊದಲ ಸಾಲಿನಲ್ಲಿ ಇದೆ.

ಜೂನ್ 5 ರಂದು ಮರು ಮೌಲ್ಯಮಾಪನ ಫಲಿತಾಂಶ ಹೊರಬಿದ್ದಿದ್ದು ಹೊಂಗಿರಣ ಶಾಲೆಯ ವಿದ್ಯಾರ್ಥಿಗಳು‌ ಸಂತಸದ ನಗೆ ಬೀರಿದ್ದಾರೆ.

ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆಗೈಯುವ
ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಇನ್ನೂ ಮಕ್ಕಳ ಸಾಧನೆಗೆ ಕಳೆದ ಮೂರು ವರ್ಷಗಳಿಂದ
ಮಾರ್ಗದರ್ಶನ ನೀಡುತ್ತಿರುವ ಭೋಧಕ
ವೃಂದದವರಿಗೆ ಶಾಲೆಯ
ಆಡಳಿತ ಮಂಡಳಿಯು ಧನ್ಯವಾದಗಳನ್ನು
ಅರ್ಪಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಸತತವಾಗಿ ನೂರಕ್ಕೆ
ನೂರರಷ್ಟು ಫಲಿತಾಂಶ ತರುವಲ್ಲಿ ಹೊಂಗಿರಣ
ಶಾಲೆಯ ಮಕ್ಕಳು ಹ್ಯಾಟ್ರಿಕ್ ಸಾಧನೆಯಲಿದ್ದಾರೆ, ಈ ಬಾರಿ ತಾಲೂಕಿಗೆ ಪ್ರಥಮ‌ ಸ್ಥಾನ ತರುವ ಮೂಲಕ ಕಿರ್ತಿ ಹೆಚ್ಚಿಸಿದ್ದಾರೆ ಎಂದು
ದಯಾನಂದ ಪ್ರಹ್ಲಾದ್ ಸಂಸ್ಥೆಯ ಕಾರ್ಯದರ್ಶಿ ಹೇಳಿದ್ದಾರೆ

ಇನ್ನೂ ಸಂಸ್ಥೆಯ ಆಡಳಿತ ಮಂಡಳಿಯ ಗೌರವ
ಅಧ್ಯಕ್ಷರಾದ ಡಿ.ನಾಗಪ್ಪ, ಅಧ್ಯಕ್ಷರಾದ ರಾಜೇಶ್ ಗುಪ್ತ
ಕಾರ್ಯದರ್ಶಿಯಾದ ದಯಾನಂದ ಪ್ರಹ್ಲಾದ್,
ಟ್ರಸ್ಟಿಗಳಾದ ಡಿಎನ್. ಶಿವಪ್ರಸಾದ್, ಮಧುಸೂದನ್, ರವರು
ಭೋಧಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Namma Challakere Local News
error: Content is protected !!