ಚಳ್ಳಕೆರೆ ನ್ಯೂಸ್ :
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಎಂ ರವೀಶ್ ಮಾತನಾಡಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ, ಪರಿಸರದ ಪ್ರಾಮುಖ್ಯತೆನ್ನು ತಿಳಿಸುತ್ತಾ ಮನೆಗೊಂದು ಮರ ಊರಿಗೊಂದು ವನ ಬೆಳೆಸಬೇಕು, ಎಂದರು.
ಪ್ರತೀ ವರ್ಷ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಗಿಡಗಳನ್ನು ನೆಟ್ಟು ಪೋಷಿಸಿರುವುದರಿಂದ ಕಾಲೇಜಿನ ಆವರಣ ಇಂದು 350 ಮರಗಳನ್ನು ಹೊಂದಿರುವ ಪುಟ್ಟ ವನವಾಗಿ ರೂಪುಗೊಂಡಿದೆ…ಇದೇ ರೀತಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಗಳ ಹತ್ತಿರ, ಹಾಗೂ ಹೊಲಗಳಲ್ಲಿ, ಊರುಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಬರಡು ಭೂಮಿಯಾದ ಚಳ್ಳಕೆರೆಯನ್ನು ಹಸಿರು ಭೂಮಿಯಾಗಿ ಬದಲಾಗಿಸುವುದು ನಿಮ್ಮೆಲ್ಲಾ ಜವಾಬ್ದಾರಿ ಎಂದು ವಸಂತಕುಮಾರ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶಾಂತಕುಮಾರಿ ಬಿ , ಹಿರಿಯ ಉಪನ್ಯಾಸಕರಾದ ಪುಟ್ಟರಂಗಪ್ಪ , ಪುಷ್ಪಲತ, ಹಬೀವುಲ್ಲಾ, ಹೀನಾ ಕೌಸರ್, ಜಾನಕಮ್ಮ, ರೇಖಾ, ಶ್ರೀನಿವಾಸ್, ರಾಜಶೇಖರ್, ಮಹಂತೇಶ್, ಚಂದ್ರಶೇಖರ್, ಅನುಷಾ, ಪಲ್ಲವಿ, ಹಾಗೂ ಎಲ್ಲಾ ಉಪನ್ಯಾಸಕು ವಿದ್ಯಾರ್ಥಿಗಳು ಭಾಗವಹಿಸಿದ್ದರು