ಚಳ್ಳಕೆರೆ ನ್ಯೂಸ್ :
ಡಿಎಸ್ ಹಾಗೂ ವೈದ್ಯರ ತರಾಟೆ ತೆಗೆದುಕೊಂಡ
ವಿಜಿಲೆನ್ಸ್ ಅಧಿಕಾರಿ
ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿನ ಆರೋಗ್ಯ ಇಲಾಖೆ
ಜಾಗೃತದಳದ ಮುಖ್ಯಾಧಿಕಾರಿ, ಶ್ರೀನಿವಾಸ್
ಚಿತ್ರದುರ್ಗದ ಸರ್ಕಾರಿ
ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು,
ಆಸ್ಪತ್ರೆ ಅವ್ಯವಸ್ಥೆ ಹಾಗೂ ಲಂಚದ ಹಾವಳಿ ದೂರು ಕೇಳಿ,
ಜಿಲ್ಲಾ
ಶಸ್ತ್ರಚಿಕಿತ್ಸಕರು ಮತ್ತು ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ
ಘಟನೆ ನಡೆದಿದೆ.
ಆಸ್ಪತ್ರೆಯ ಇಂಚಿಂಚು ಬಿಡದೆ ಪರಿಶೀಲಿಸಿದ
ಅಧಿಕಾರಿ, ಸ್ವಚ್ಚತೆ ಹಾಗೂ ನೀರಿನ ಅವ್ಯವಸ್ಥೆ ಸರಿಪಡಿಸಬೇಕು.
ಭ್ರಷ್ಟಾಚಾರ ರಹಿತ ಸೇವೆ ನೀಡಬೇಕೆಂದು ತಾಕೀತು ಮಾಡಿದರು