ಚಳ್ಳಕೆರೆ ನ್ಯೂಸ್ :
ರೈತರ ಕಷ್ಟ ನೀಗಲಿ ಎಂಬ ಉದ್ದೇಶಕ್ಕೆ ಪೂಜೆ
ನಡೆಸಲಾಗುತ್ತಿದೆ
ರಾಜ್ಯದಲ್ಲಿ ಮಳೆಯಿಲ್ಲದೆ ಬರಗಾಲದಿಂದ ತತ್ತರಿಸಿ ಹೋಗಿದೆ.
ಅಂತರ್ಜಲ ಕುಸಿತ ಕಂಡಿದ್ದು, ಸಾವಿರಾರು ಕೊಳವೆಬಾವಿಗಳು
ಬತ್ತಿ ಹೋಗಿವೆ.
ರೈತರು ತಮ್ಮ ತೋಟಗಳಿಗೆ ನೀರಿಲ್ಲದೆ ಒಣಗಿ
ಹೋಗಿವೆ.
ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯ ಸಮೃದ್ಧಿಯಿಂದ ಇರಬೇಕೆಂಬ ಉದ್ದೇಶದಿಂದ ಶ್ರೀ
ಸತ್ಯನಾರಾಯಣ ಪೂಜೆ ನೆರವೇರಿಸಲಾಗುತ್ತಿದೆ ಎಂದು ಹೊಳಲ್ಕೆರೆ
ರಂಗಾಪುರದ ಗುರುಕುಲದ ಡಾ. ತಿಪ್ಪಾರೆಡ್ಡಿ ಗುರೂಜಿ ಹೇಳಿದರು.
ಲೋಕಕಲ್ಯಾಣಾರ್ಥ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ
ಮಾತಾಡಿದರು.