ಭೀಮಗೊಂಡನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ. ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರು ಡಾ. ಜಿ. ತಿಪ್ಪೇಸ್ವಾಮಿ ಗೌಡಗೆರೆ
ಆಸ್ತಿ ಮಾಡುವು ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಕ್ಕಳ ನ್ನೆ ಆಸ್ತಿವಂತರನ್ನಾಗಿ ಮಾಡಿ.
ಎಂದು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರು ಡಾ. ಜಿ. ತಿಪ್ಪೇಸ್ವಾಮಿ ಗೌಡಗೆರೆ ಹೇಳಿದ್ದಾರೆ.
ನಾಯಕನಹಟ್ಟಿ::ಮೇ.29. ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿ ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಪೋಷಕರು ಕಷ್ಟಪಟ್ಟಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದರು.
ಇದೇ ಸಂದರ್ಭದಲ್ಲಿ. ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ. ರಂಗಸ್ವಾಮಿ. ಎಸ್ ಡಿ ಎಂ ಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಊರಿನ ಮುಖಂಡ ಜಿ ಡಿ ಆರ್ ತಿಪ್ಪೇಸ್ವಾಮಿ ,ಎಸ್ ಓ ಬಸವರಾಜ್, ಇತಿಹಾಸ ಪಾಧ್ಯಾಪಕ ಸುರೇಶ್, ಶಾಲೆಯ ಮುಖ್ಯ ಶಿಕ್ಷಕ ಚಿದಾನಂದಪ್ಪ, ಸಹ ಶಿಕ್ಷಕ ಭೀಮಪ್ಪ, ಶಿಕ್ಷಕಿರಾದ ಜೆ ಎಸ್ ಅನಿತಾ, ಆರ್. ಗೀರ್ವಾಣಿ, ಹಾಗೂ ಗ್ರಾಮದ ಯುವಕ ಸಿ.ಗೌತಮ್. ವಿದ್ಯಾರ್ಥಿ ಗಳು ಇದ್ದರು.