ಚಳ್ಳಕೆರೆ ನ್ಯೂಸ್ :
ಅಂತ್ಯ ಸಂಸ್ಕಾರಕ್ಕೆ ಶವ ಹೊತ್ತು ಚಾನಲ್ ದಾಟುವ
ಗ್ರಾಮಸ್ಥರು
ಹಿರಿಯೂರು ತಾಲೂಕು ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ
ದಾರಿ ಇಲ್ಲದೆ ಅಂತ್ಯಸಂಸ್ಕಾರ ಮಾಡಲು ಚಾನಲ್ ಗೆ ಇಳಿದು
ಸಾಗಬೇಕು.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು
3 ವರ್ಷದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು
ಹುಚ್ಚವ್ವನಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು, ರಸ್ತೆ ಹಾಗೂ ಸೇತುವೆ
ಮಾಡಿಕೊಡಬೇಕು, ಇಲ್ಲವೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ
ಮುಂದೆ ಶವವಿಟ್ಟು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಗ್ರಾಪಂ
ಮಾಜಿ ಸದಸ್ಯ ರಾಘವೇಂದ್ರ ನೀಡಿದ್ದಾರೆ.