ಚಳ್ಳಕೆರೆ ನ್ಯೂಸ್ :
ಕಳೆದ ಎರದು ದಿನಗಳ ಹಿಂದೆ ಮೊಳಕಾಲ್ಮೂರು ಸಾರ್ವಜನಿಕರ ಆಸ್ಪತ್ರೆಯಲ್ಲಿ ವಿದ್ಯುತ್ ಕೈ ಕೊಟ್ಟು ದೀಪದ ಬೆಳಕಿನಲ್ಲಿ ರೋಗಿಗಳ ತಪಾಸಣೆ ಎಂದು ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಮೊಳಕಾಲ್ಮೂರು ಶಾಸಕ.ಎನ್.ವೈ.ಗೋಪಾಲಕೃಷ್ಣ ಆಸ್ಪತ್ರೆಗೆ ಬೇಟಿನೀಡಿ ಪರಿಶೀಲನೆ ನಡೆಸಿದ ಹಿನ್ನಲೆಯಲ್ಲಿ ಇಂದು ಆಸ್ಪತ್ರೆಗೆ ನಿರಂತರವಾಗಿ ವಿದ್ಯುತ್ ಒದಗಿಸಲು ಜನರೇಟರ್ ವ್ಯವಸ್ಥೆ ಹಾಗಿದೆ.
ಹೌದು
ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ
ಜನರೇಟರ್ ಸರಿ ಹೋಗಿದ್ದು ಯಾರು ಕೂಡ ಆತಂಕ ಪಡುವ
ಅಗತ್ಯವಿಲ್ಲ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ
ವೈದ್ಯಾಧಿಕಾರಿ ಡಾಕ್ಟರ್ ಮಂಜುನಾಥ್ ಹೇಳಿದ್ದಾರೆ.
ಸರ್ಕಾರಿ
ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಕು ಇಲ್ಲದೆ ಮೇಣದಬತ್ತಿ ಬೆಳಕಿನಲ್ಲಿ
ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸುದ್ದಿ ಮಾಧ್ಯಮಗಳಲ್ಲಿ
ಸುದ್ದಿಯಾಗಿತ್ತು
ಈ ಈ ಹಿನ್ನಲೆಯಲ್ಲಿ ಜನರೇಟರ್ ತಾಂತ್ರಿಕ
ಸಿಬ್ಬಂದಿಯಿಂದ ರಿಪೇರಿ ಮಾಡಿಸಲಾಗಿದೆ ಎನ್ನಲಾಗಿದೆ.