ಚಳ್ಳಕೆರೆ ನ್ಯೂಸ್ :
ಮೊಳಕಾಲ್ಮೂರು
ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಿದ್ಧತೆ
ಮೊಳಕಾಲ್ಮೂರು ತಾಲೂಕಿನ ಬಹುದಿನಗಳ ಬೇಡಿಕೆಯಾಗಿದ್ದ
ಇಂದಿರಾ ಕ್ಯಾಂಟೀನ್ ತೆರೆಯಲು ಸಕಲ ಸಿದ್ಧತೆ ನಡೆದಿದೆ.
ತಾಲೂಕಿನ ನಾನಾ ಭಾಗಗಳಿಂದ ವಿವಿಧ ಕೆಲಸಗಳಿಗೆ ಬರುವ
ಜನರು ಮತ್ತು ಕೂಲಿ ಕಾರ್ಮಿಕರು ಹಸಿವು ನೀಗಿಸಿಕೊಳ್ಳಲು
ಪ್ರತಿನಿತ್ಯ ಹವಣಿಸುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ತೆರಿಯುವಂತೆ
ಹಲವು ವರ್ಷಗಳಿಂದ ತಾಲೂಕು ಆಡಳಿತಕ್ಕೆ ಮನವಿ
ಮಾಡಲಾಗಿತ್ತು.
ಜನರ ಆಸೆಯಂತೆ ಇದೀಗ ಕಾಲ ಕೂಡಿ ಬಂದಿದ್ದು
ಇಂದಿರಾ ಕ್ಯಾಂಟೀನ್ ಕಾಮಗಾರಿಯ ಕೆಲಸ ಭರದಿಂದ ಸಾಗಿದೆ.
ಜೂನ್ ತಿಂಗಳ ತೆರೆಯುವ ನಿರೀಕ್ಷೆ ಇದೆ.