ಚಳ್ಳಕೆರೆ ನ್ಯೂಸ್ :

ಬಿಸಿಲ ಬೇಸಿಗೆಗೆ ಜನರು ಈಜುಕೊಳಗಳ‌ ಮೊರೆ ಹೊದರೆ ಕೆಲವರು ಸ್ಥಳೀಯವಾಗಿ
ಕಲ್ಲುಕ್ವಾರಿಯಲ್ಲಿ ಈಜುವ ಸಹಾಸಕ್ಕೆ ಹೋಗುತ್ತಾರೆ.

ಇನ್ನೂ ಈ ಕಲ್ಲು ಕ್ವಾರಿಗಳು ಅಪಾಯಕಾರಿ ಜೀವಕ್ಕೆ ಕಂಟಕ ತರುವ ತಗ್ಗು ಪ್ರದೇಶಗಳಾಗಿವೆ.

ಇಂತಹ ಸ್ಥಳಗಳಲ್ಲಿ ಈಜುವ ಸಹಾಸಕ್ಕೆ ಹೋಗುವ ಯುವಕರ ಹುಚ್ಚು ಮನಸ್ಥಿತಿಗೆ ಕಡಿವಾಣ ಇಲ್ಲವಾಗಿದೆ.

ಈಜಾಡುವ ಸಮಯದಲ್ಲಿ ಸ್ವಲ್ಪ ಯಾಮಾರಿದರೆ
ಪ್ರಾಣಕ್ಕೆ ಕುತ್ತು ತರುತ್ತಾವೆ

ಬಿಸಿಲಿನ ಧಗಗೆ ಬೇಸತ್ತ ಯುವಕರು ನೀರು ಸಿಕ್ಕರೆ ಸಾಕು ಈಜಾಡಿ
ದೇಹ ತಂಪಾಗಿಸಿಕೊಳ್ಳಲು ಕೃಷಿ ಹೊಂಡ ಹಾಗೂ ಕಲ್ಲು ಕ್ವಾರಿ
ನೀರಿನಲ್ಲಿ ಈಜಲು ಮುಂದಾಗಿದ್ದಾರೆ.

ಕಲ್ಲು ಕ್ವಾರೆಯಲ್ಲಿ ನೀರಿಗೆ
ಹಾರಿದರೆ ಜೀವಕ್ಕೆ ಅಪಾಯ ಇದೆ ಎಂಬುದು ತಿಳಿಯದೆ ಅದೆಷ್ಟೋ
ಜೀವಿಗಳು ಇಂತಹ ಕಲ್ಲು ಕ್ವಾರಿಯಲ್ಲಿ ಸಾವುನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ಚಳ್ಳಕೆರೆ ತಾಲೂಕಿನ
ಅಶೋಕ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೃಹತ್
ಕಲ್ಲಿನ ಕ್ವಾರೆಯಲ್ಲಿ ಯುವಕರು ಮೋಜು ಮಸ್ತಿ ಮಾಡಲು ಬರುತ್ತಿದ್ದು
ಸ್ವಲ್ಪ ಯಾಮಾರಿದರೆ ಪ್ರಾಣಕ್ಕೆ ಕುತ್ತು ಬರುತ್ತೆ ಇಂತಹ ಅಪಾಯಕಾರಿ ಸ್ಥಳೀಗಳನ್ನು ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಿನ ತಹಶಿಲ್ದಾರ್ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹಾಗುವ ದುರ್ಘಟನೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎನ್ನಲಾಗುತ್ತದೆ.

Namma Challakere Local News
error: Content is protected !!