ಚಳ್ಳಕೆರೆ : ಸುಮಾರು 500 ವರ್ಷಗಳ ಇತಿಹಾಸ ಇರುವ ದೇವಾಲಯಗಳಲ್ಲಿ ಪೂರ್ವಿಕರು ನಡೆಸಿಕೊಂಡ ಬಂದ ಪದ್ದತಿಗಳು ಆಚರಣೆಗಳು ಕೈಂಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ದೊಣ್ಣೆ ಮನೆತನದ ಪಟ್ಟದ ಐನೋರು ಬಸವರಾಜ್ ಎಂಬುವವರು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ ಬೆನ್ನಲೆ ಚಳ್ಳಕೆರೆ ತಾಲೂಕು ಕಛೇರಿಯ ಕಂದಾಯ ಅಧಿಕಾರಿಗಳು ಸ್ಥಳ ಪರೀಶಿಲಿಸಿ ವರದಿ ನೀಡಲು ಎರಡು ಬಣದವರ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ.
ಹೌದು ನಗರದ ಆರಾಧ್ಯದೇವ ಶ್ರೀ ವೀರಭದ್ರಸ್ವಾಮಿ ದೇವಾಲಯ ಹಾಗೂ ಶ್ರೀಚಳ್ಳಕೆರೆಮ್ಮ ದೇವಿ ದೇವಾಲಯದ ಎರಡು ದೇವಾಲಯಗಳಲ್ಲಿ ಸರಿಯಾದ ರೀತಿಯಲ್ಲಿ ದೇವಾರ ಆರಾಧನೆ ನಡೆಯುತ್ತಿಲ್ಲ ಆದ್ದರಿಂದ ಮುಜುರಾಯಿ ಇಲಾಖೆಗೆ ಸೇರಿಸಬೇಕು ಎಂಬ ವರದಿ ಮೇರೆಗೆ ಚಳ್ಳಕೆರೆ ತಾಲೂಕು ಕಂದಾಯ ಅಧಿಕಾರಿಗಳು ತಂಡ ದೇವಾಸ್ಥಾನಕ್ಕೆ ಸಂಬAಧಿಸಿದ ಪದಾಧಿಕಾರಗಳ ಸಮಕ್ಷಮದಲ್ಲಿ ಸಭೆ ನಡೆಸಿದ್ದಾರೆ.
ಇನ್ನೂ ಸಭೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವರುಗಳ ದೇವಾಲಯ ಹೊರತು ಪಡಿಸಿದರೆ ಬೇರೆ ಯಾವುದೇ ಮೂಲ ಆದಾಯ ಇಲ್ಲ ಇನ್ನೂ ಭಕ್ತರು ನೀಡಿದ ಅಲ್ಪ ಕಾಣಿಕೆ ಸಂದಾಯವಾಗುತ್ತಿದೆ, ಇದರಿಂದ ದೇವರ ಪೂಜಾ ಕೈಂಕಾರ್ಯಗಳು ಜರುಗುತ್ತಿವೆ, ಇದರಿಂದ ಮುಜರಾಯಿ ಇಲಾಖೆಗೆ ಒಳಪಡುವ ಯಾವುದೇ ಆಸ್ತಿ ಪಾಸ್ತಿ ಈ ದೇವಾಲಯಗಳಿಗೆ ಇಲ್ಲದೆ ಇರುವುದು ಕಂಡು ಬಂದಿದೆ ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ, ಇನ್ನೂ ಪೂರ್ವಿಕರು ಯಾವ ರೀತಿಯಲ್ಲಿ ವಿಧಿ ವಿಧಾನ ಪದ್ದತಿಗಳನ್ನು ಅನುಸರಿಸಿಕೊಂಡು ದೇವಿಗಳ ಆರಾಧಕರು ಹಾಗಿದ್ದರು, ಆದೇ ರೀತಿಯಲ್ಲಿ ಸಂಪ್ರದಾಯ ಮುಂದುವರೆಸಿಕೊAಡು ಹೋಗಲಾಗುವುದು ಹಾಗೂ ಈಗೀರುವ ಕೇವಲ “ಕಮಿಟಿ” ಬದಲಾಗಿ ‘ಟ್ರಸ್ಟ್” ಮಾಡಿಸಿಕೊಂಡು ಮುಂದುವರೆಸಲಾಗುವುದು ಎಂದು ಕಂದಾಯ ಅಧಿಕಾರಿಗಳಿಗೆ ಎರಡು ಬಣದವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಹೇಳಿಕೆ : 1
ಸಾವಿರಾರು ವರ್ಷಗಳ ಇತಿಹಾಸ ಇರುವ ಗುರುಪರಂಪರೆಯ ದೇವಾಲಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಗಮನ ಸೇಳೆದಿದ್ದೆವೆ, ಆದ್ದರಿಂದ ಕಂದಾಯ ಅಧಿಕಾರಿಗಳು ಸ್ಥಳ ಪರೀಶಿಲಿಸಿ ಮಾಹಿತಿ ಪಡೆಯಲು ಬಂದಿದ್ದರು, ಎರಡು ಬಣಗಳ ಸಮಕ್ಷಮದಲ್ಲಿ ಸಭೆ ನಡೆಸಿ ಅಂತಿಮವಾಗಿ ಈಗಿರುವ ಎರಡು ದೇವಾಲಯಗಳ ಕಮಿಟಿ ಬೇಡ ಅದರ ಬದಲಾಗಿ ಟ್ರಸ್ಟ್ ಮಾಡಿಸಿಕೊಂಡರೆ ಅಧಿಕೃತವಾಗುತ್ತದೆ, ಎಂದು ಕಂದಾಯ ಅಧಿಕಾರಿಗಳ ಗಮನ ಸೇಳೆದಿದ್ದೆವೆ .— ಪಟ್ಟದ ಐನೋರು ಬಸವರಾಜ್.


ಹೇಳಿಕೆ :2
ಪೂರ್ವಿಕರು ಆರಾಧನೆ ಮಾಡಿಕೊಂಡ ಪುರಾತನ ಈ ದೇವರುಗಳ ದೇವಾಲಯಕ್ಕೆ ಸಂಬAಧಿಸಿದAತೆ ದೇವಾಲಯ ಬಿಟ್ಟರೆ ಯಾವುದೇ ಆದಾಯ ಬರುವ ಆಸ್ತಿಗಳು ಇಲ್ಲ, ಆದ್ದರಿಂದ ಗ್ರಾಮದಲ್ಲಿ ಒಪ್ಪಿ ಟ್ರಸ್ಟ್ ಮಾಡಿಸಲು ಒಪ್ಪಿಗೆ ಸಹಿ ಮಾಡಲಾಗಿದೆ, ಈಗೀರುವ ಎಲ್ಲಾ ಬಾಬ್ತುದಾರರು ಯಥಾ ಪ್ರಕಾರ ಸಂಪ್ರದಾಯ ಮುಂದುವರೆಸಲಾಗುವುದು.– ಧರ್ಮಧಶಿಗಳಾದ ಪಿಜಿ.ರಾಮಣ್ಣ, ಪಿ.ತಿಪ್ಪೆಸ್ವಾಮಿ ತಳವಾರ ಮುಖ್ಯಸ್ಥರು.

ಇದೇ ಸಂಧರ್ಭದಲ್ಲಿ ಕಂದಾಯ ನಿರೀಕ್ಷಕರಾದ ಪಿ.ಲಿಗೇಗೌಡ, ಗ್ರಾಮ ಲೆಕ್ಕಿಗಾ ಪ್ರಕಾಶ್, ಧರ್ಮಧಶಿಗಳಾದ ಪಿಜಿ.ರಾಮಣ್ಣ. ಪಿ.ತಿಪ್ಪೆಸ್ವಾಮಿ, ದಳವಾಯಿಮೂರ್ತಿ, ನಾಗರಾಜ್, ಗೌಡ್ರುನಾಗಣ್ಣ, ಮಂಜಣ್ಣ, ಸೂರಯ್ಯ, ಚಿಕ್ಕಣ್ಣ, ರುದ್ರಣ್ಣ, ಬಸವರಾಜ್, ಹೆಚ್.ಮಂಜಣ್ಣ, ವಿ.ತಿಪ್ಪೆಸ್ವಾಮಿ. ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!