ಚಳ್ಳಕೆರೆ ನ್ಯೂಸ್ :
ಎಸ್ಸಿ ಎಸ್ಟಿ ಹಿಂದುಳಿದವರಿಗೆ ಮೀಸಲಾತಿ ನಿಗಧಿ ಮಾಡಿ
ರಾಜ್ಯದ ಎಲ್ಲಾ ಡಿಸಿಸಿ, ಪಿಎಲ್ ಡಿ ಬ್ಯಾಂಕ್ ಗಳು, ಆರ್ ಎಂಸಿ,
ಇತರೇ ಸಂಸ್ಥೆಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ
ಮೀಸಲಾತಿ ನಿಗಧಿ ಮಾಡಬೇಕು ಎಂದು ಡಿಎಸ್ ಎಸ್ ಮುಖಂಡ
ದುರುಗೇಶ್ ಒತ್ತಾಯಿಸಿದ್ದಾರೆ.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.
ಪ್ರಜಾಪ್ರಭುತ್ವ ದಡಿಯಲ್ಲಿ
ಚುನಾವಣೆಯಲ್ಲಿ, ಆಯ್ಕೆಯಾಗಿ ಆಡಳಿತ ನಡೆಸಬೇಕು.
ಈ
ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ ಹಾಗೂ ಹಿಂದುಳಿದ ವರ್ಗಗಗಳ ಅಧ್ಯಕ್ಷ
ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿನೀಡಲು ಒತ್ತಾಯಿಸಿದರು.