ಚಳ್ಳಕೆರೆ ನ್ಯೂಸ್ :
ಮಳೆ ಇಲ್ಲದೆ ಬೀಕಾರ ಬರಗಾಲದಲ್ಲಿ ಇರುವ ಬಯಲು ಸೀಮೆ ಜನರು ಕಳ್ಳರ ಹಾವಳಿಗೆ ಬೇಸತ್ತು ಹೋಗಿದ್ದಾರೆ.
ಮನೆ ಬೀಗ ಮುರಿದು 138 ಗ್ರಾಂ ತೂಕದ 4.43 ಲಕ್ಷ
ಮೌಲ್ಯದ ಬಂಗಾರ ಕಳ್ಳತನ ಮಾಡಲಾಗಿದೆ.
ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ಜಗನ್ನಾಥಚಾರಿ
ಎಂಬುವವರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದನ್ನು
ಗಮನಿಸಿದ ಕಳ್ಳರು ತಮ್ಮ ಕೈಚಳತೋರಿದ್ದಾರೆ.
ಮನೆಯ ಬಾಗಿಲು ಮುರಿದು ಒಳ
ಪ್ರವೇಶಿಸಿ ಬೀರುವಿನ ಬೀಗವನ್ನು ಒಡೆದು ಸುಮಾರು 138 ಗ್ರಾಂ
ತೂಕದ 4.43 ಲಕ್ಷ ಮೌಲ್ಯದ ವಿವಿಧ ಬಂಗಾರದ ಆಭರಣಗಳನ್ನು
ದೋಚಿ ಪರಾರಿಯಾಗಿದ್ದಾರೆ.
ಜಗನ್ನಾಥಚಾರಿ ಎಂಬುವವರ ಪತ್ನಿ
ಎನ್. ಭಾಗ್ಯ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು,
ಪೊಲೀಸರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ..