ಚಳ್ಳಕೆರೆ: ಸರ್ಕಾರದ ಕೆಲಸವನ್ನು ದೇವರ ಕೆಲಸವೆಂದು ಕಾರ್ಯ ನಿರ್ವಹಿಸುವ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಸಿಗುವುದು ಅಪರೂಪವಾಗಿದೆ ಆದರೆ ಚಿತ್ರದುರ್ಗ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ಪತ್ರಾಂಕಿತ ಸಹಾಯಕರಾಗಿ ಜನಾನುರಾಗಿಯಾಗಿ ಧನಂಜಯ ಟಿ ಎನ್ ರವರು ಉತ್ತಮ ಕೆಲಸ ನಿರ್ವಹಿಸಿದ್ದರು ಎಂದು ಶಿಕ್ಷಕ ಎನ್ ಮಲ್ಲೇಶ್ ಅಭಿಪ್ರಾಯ ಪಟ್ಟರು. 

ಟಿ ಎನ್ ಧನುಜಯರವರ ನಿವೃತ್ತಿಯ ಹಿನ್ನೆಲೆಯಲ್ಲಿ ನಗರದ ವಿಠಲ ನಗರದಲ್ಲಿರುವ ಅವರ ನಿವಾಸಕ್ಕೆ ಸ್ನೇಹ ಬಳಗದ ವತಿಯಿಂದ ತೆರಳಿ ಶುಭಾಶಯ ಕೋರಿ ಮಾತನಾಡಿದ ಅವರು ಧನಂಜಯ ರವರು ಉತ್ತಮ ಕೆಲಸಗಾರರಾಗಿದ್ದರು ಶಿಕ್ಷಕರಿಗೆ ಜಿಲ್ಲಾ ಮಟ್ಟದಲ್ಲಿ ಯಾವುದೇ ಕೆಲಸ ಕಾರ್ಯಗಳಾಗಬೇಕಾದರೆ ಅವರು ತಮ್ಮ ಕೆಲಸಗಳ ಒತ್ತಡದ ನಡುವೆಯೂ ದೂರದ ಊರುಗಳಿಂದ ಬಂದಿದ್ದಾರೆ ಎಂಬ ಸದುದ್ದೇಶವನ್ನು ಇಟ್ಟುಕೊಂಡು ತ್ವರಿತಗತಿಯಲ್ಲಿ ತಮ್ಮದಲ್ಲದ ಕೆಲಸವಾಗಿದ್ದರು ಸಹ ಸ್ವತಹ ತಾವೇ ಮುಂದೆ ನಿಂತು ಶಿಕ್ಷಕರ ಕೆಲಸ ಕಾರ್ಯಗಳನ್ನು ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಸ್ನೇಹಜೀವಿಯಾಗಿ ಶಿಕ್ಷಕ ವರ್ಗದಲ್ಲಿ ಗುರುತಿಸಿಕೊಂಡಿದ್ದರು. ಇವರ ನಿವೃತ್ತಿಯ ಜೀವನ ಸುಖಮಯವಾಗಿ ಸಂತೋಷದಿಂದ ಕೂಡಿರಲಿ ಕುಟುಂಬದೊಂದಿಗೆ ಸದಾ ಹಸನ್ಮುಖಿಯಾಗಿ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು. 

ಸಂಜೀವಿನಿ ಲ್ಯಾಬ್ ನ ಎಂ ಎನ್ ಮೃತ್ಯುಂಜಯ ಮಾತನಾಡಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುವುದು ಸುಲಭದ ಕೆಲಸವಲ್ಲ ಸದಾ ಒಂದಿಲ್ಲೊಂದು ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ ಧನಂಜಯ ರವರು ಪತ್ರಾಂಕಿತ ಅಧಿಕಾರಿಯಾಗಿ ಶಿಸ್ತುಬದ್ದವಾದ ಹಾಗೂ ಸ್ನೇಹ ಪರವಾದ ಕೆಲಸ ನಿರ್ವಹಿಸಿರುವುದು ಶಿಕ್ಷಕರುಗಳ ಮಾತಿನಿಂದಲೇ ತಿಳಿಯುತ್ತದೆ ಅಧಿಕಾರಿ ವರ್ಗದವರು ಕೆಳಹಂತದ ಸಿಬ್ಬಂದಿಗಳನ್ನು ತಮ್ಮ ಮನೆಯವರಂತೆ ನೋಡಿಕೊಂಡು ಉತ್ತಮ ಕೆಲಸಗಳನ್ನು ಮಾಡಿದಾಗ ಮಾತ್ರ ಇಂತಹ ಗೌರವ ಪಡೆಯಲು ಸಾಧ್ಯವಾಗುತ್ತದೆ ಅವರ ಜೀವನ ಕುಟುಂಬದೊಂದಿಗೆ ಸದಾ ಸಂತಸದಾಯಕವಾಗಿರಲಿ ಎಂದು ಹಾರೈಸಿದರು. 

ಈ ವೇಳೆ ಮಾತನಾಡಿದ ಶಿಕ್ಷಣ ಇಲಾಖೆ ನಿವೃತ್ತ ಪತ್ರಾಂಕಿತ ಅಧಿಕಾರಿ ಧನಂಜಯ ಶಿಕ್ಷಣ ಇಲಾಖೆಯಲ್ಲಿ ನನ್ನ ಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡಿಕೊಂಡು ಬಂದಿದ್ದೇನೆ ಶಿಕ್ಷಣ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿ ವರ್ಗದವರು ಹಾಗೂ ಶಿಕ್ಷಕ ವರ್ಗದ ಸಹಕಾರದಿಂದಾಗಿ ನಾನು ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು ನನ್ನನ್ನು ಸನ್ಮಾನಿಸಿದ ಸ್ನೇಹ ಬಳಗಕ್ಕೆ ಹೃದಯಪೂರ್ವಕವಾಗಿ ಅಭಿನಂದನೆ ತಿಳಿಸುತ್ತೇನೆ ಎಂದರು. 

ಈ ಸಂದರ್ಭದಲ್ಲಿ ಶಿಕ್ಷಕ ಎನ್ ಮಲ್ಲೇಶ್ ಸಂಜೀವಿನಿ ಲ್ಯಾಬ್ ಎಂಎಂ ಮೃತ್ಯುಂಜಯ ಶಿಕ್ಷಕ ಹೆಚ್ ರವಿಕುಮಾರ್ ಜಿ ಚಂದ್ರಣ್ಣ, ಚಂದ್ರು ಕುಂದಾಪುರ ಉಪಸ್ಥಿತರಿದ್ದರು.

Namma Challakere Local News
error: Content is protected !!