ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ಜಿಲ್ಲೆಯ
ಹಿರಿಯೂರು ನಗರದ ರಾಮಮಂದಿರ ಸರ್ಕಲ್ ಬಳಿ IPL ಬೆಟ್ಟಿಂಗ್
ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ.
ಹಿರಿಯೂರು ನಗರದ ರಾಮಮಂದಿರ ಸರ್ಕಲ್ ಬಳಿ ಬೆಟ್ಟಿಂಗ್
ಆಡುತ್ತಿದ್ದ ಆರೋಪಿಗಳು ತಿಮ್ಮೇಗೌಡ, ಶಶಿಕುಮಾರ್ ಎಂಬ
ಆರೋಪಿಗಳು ಎಂದು ತಿಳಿದಿದ್ದು
ಬಂಧಿತರಿಂದ 1ಲಕ್ಷ 25 ಸಾವಿರ ಹಣ,
ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್ಸಪೆಕ್ಟರ್ ರಾಘವೇಂದ್ರ
ನೇತೃತ್ವದಲ್ಲಿ ದಾಳಿ ನಡೆದಿದ್ದು
ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.