ಮುಂಜಾನೇ ಎದ್ದು ಮನೆ ಮನೆಗೆ ಪೆಪರ್ ಹಾಕುವ ಹುಡುಗನ ಕವಿತೆ ನೀವು ಒಂದು ಬಾರಿ ಸವಿಯಲೆ ಬೇಕು..!
ಹೌದು
ರವಿ ಕಾಣದನ್ನು ಕವಿ ಕಂಡ ಎಂಬ ಮಾತನ್ನು ಸುಳ್ಳಾಗಿಸುವ ಪೆಪರ್ ಬಾಯ್ ಇಂದು ಯುವ ಸಾಹಿತಿಯಾಗಿ ಹೊರಹೊಮ್ಮಿದ್ದಾನೆ.
ಬಾ ಸಹೋದರಿ ಜೊತೆಯಾಗಿ
ನೀ ಇರಬೇಕು ತಂಗಿಯಾಗಿ…
ಸೃಜನಶೀಲತೆಯ ಸಾಹುಕಾತಿಯಾಗಿ
ಮಧುರ ಸ್ನೇಹಿತೆಯ ತಂಗಿಯಾಗಿ…..
ಶ್ರೀಗಂಧದಂತಹ ಚಂದನ ಗುಣದವಳು
ಕಮಲದಂತಹ ಮುಖವುಳ್ಳ ನಯನದವಳು……
ತಾಯಿಯ ಪ್ರೀತಿ, ತಂದೆಯ ಸಹನೆ ತೋರಿದವಳು
ಶ್ವೇತತೆಯ, ಸುವರ್ಣ ಮನದವಳು…
ಜ್ಞಾನ ಜ್ಯೋತಿಯಾಗಿಸಲು
ಮಧುರ ಧ್ವನಿಯ ಕೊಳಲು ನೀನು….
ಪೃಥ್ವಿಯ ಸಹನೆ, ಶಾಂತಿಯಾಗಿಹಳು
ಪವಿತ್ರತೆಯ ಕಾಮಧೇನುಯಾಗಿಹಳು….
ಮನೆಯ ಮುತ್ತು ಕನ್ಯ ನನ್ನ ಸೋದರಿ
ಸಿಂಧೂರತೆಯ ಒಡತಿ ನನ್ನ ಸಹೋದರಿ…..
ಸರ್ವರ ನೆಲೆಯ ನವಿಲು ನನ್ನ ಸೋದರಿ,
ಅಕ್ಕರೆಯ ಸೋದರಿ ನನ್ನ ಹೃದಯದ ಸಹೋದರಿ……
ವಿದ್ಯಾರ್ಥಿ— ಪಾಲನಾಯಕ