ಚಳ್ಳಕೆರೆ : ಇಂದಿನ ಅಧುನಿಕ ಕಾಲಘಟ್ಟದಲ್ಲಿ ಮನುಷ್ಯ ಜಾತಿ, ಮತ, ಹಾಗೂ ಧರ್ಮದ ಸಂಕೋಲೆಯಿAದ ಹೊರಬರಬೇಕು ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ದೃಷ್ಟಿಕೋನ ಬದಲಾಗಲು ಸಾಧ್ಯ ಎಂದು ಕಬೀರಾನಂದಾಶ್ರಮದ ಶಿವಲಿಂಗಾನAದ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.


ಚಳ್ಳಕೆರೆ ನಗರದ ನರಹರಿ ನಗರದಲ್ಲಿರುವ ಶ್ರೀ ನರಹರೇಶ್ವರ ದೇವಾಲಯದಲ್ಲಿ ಶ್ರೀ ನರಹರಿ ಸೇವಾ ಪ್ರತಿಷ್ಠಾನ ವತಿಯಿಂದ ಬ್ರಹ್ಮಶ್ರೀ ಲಕ್ಷ್ಮಿನರಸಿಂಹ ಸದ್ಗುರು ಸ್ವಾಮಿ ಶ್ರೀ ಸಿಂಹಾದ್ರಿ ಸದ್ಗುರು ಸ್ವಾಮಿ ಹಾಗೂ ಮಾತೃಶ್ರೀ ನಾಗವೇಣಮ್ಮನವರ ದಿವ್ಯ ಮಂಗಳ ವಿಗ್ರಹ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.


ಇನ್ನೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ
ರಘುಮೂರ್ತಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನರಹರಿ ನಗರದಲ್ಲಿರುವ ಶ್ರೀನರಹರೇಶ್ವರ ದೇವಾಲಯದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ದಿವ್ಯ ಮಂಗಳ ವಿಗ್ರಹ ಅನಾವರಣ ಮಹೋತ್ಸವದ ಕಾರ್ಯಕ್ರಮವು ಶ್ರೀ ನರಹರಿ ಸೇವಾ ಪ್ರತಿಷ್ಠಾನ ವತಿಯಿಂದ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯವಾದದ್ದು,
ಸಮಾಜದಲ್ಲಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ನಮ್ಮಲ್ಲಿನ ಆತ್ಮಸ್ಥೆರ್ಯ ಹೆಚ್ಚಾಗಲು ಸಾಧ್ಯ. ನಮ್ಮ ಮನಸ್ಸನ್ನು ಪ್ರಶಾಂತವಾಗಿಡಲು ಆಧ್ಯಾತ್ಮಿಕ ಕಾರ್ಯಕ್ರಮಗಳು ಸಹಕಾರಿ ಆಗಲಿದೆ ಎಂದು
ತಿಳಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಂಜುನಾಥ್, ಸಂಜೀವಮೂರ್ತಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!