ಚಳ್ಳಕೆರೆ: ಅಂತಿಮ ರ‍್ಷದ ಪದವಿ ವಿದ್ಯರ‍್ಥಿಗಳು ಪದವಿ ಹಂತದಲ್ಲಿಯೇ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಂಡು ಉದ್ಯೋಗ ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಡಿಜಿಟಲ್ ಕೌಶಲ್ಯ ರ‍್ನಾಟಕದ ಸಹಯೋಗದೊಂದಿಗೆ ಕಾಲೇಜಿನ ವಿದ್ಯರ‍್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಎಂಬ ಕರ‍್ಯಕ್ರಮವನ್ನು ರ‍್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೆಚ್ ಪಿ ಪಿ ಸಿ ರ‍್ಕಾರಿ ಪ್ರಥಮ ರ‍್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿಎಸ್ ಮಂಜುನಾಥ್ ತಿಳಿಸಿದರು.

ಚಳ್ಳಕೆರೆ.ನಗರದ ಕಾಲೇಜಿನಲ್ಲಿ ಅಂತಿಮ ರ‍್ಷದ ವಾಣಿಜ್ಯ ವಿಭಾಗದ ವಿದ್ಯರ‍್ಥಿಗಳಿಗಾಗಿ ಹಮ್ಮಿಕೊಂಡಿದ್ದ ಡಿಜಿಟಲ್ ಮರ‍್ಕೆಟಿಂಗ್ ಕುರಿತ ಕರ‍್ಯಗಾರದ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯರ‍್ಥಿಗಳು ಪದವಿ ಮುಗಿಸಿದ ಮೇಲೆ ರ‍್ಕಾರಿ ಕೆಲಸ ದೊರೆಯುತ್ತದೆ ಎಂಬ ಆಶಾವಾದದೊಂದಿಗೆ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗದೆ ನಿರುದ್ಯೋಗಿಗಳಾಗಿ ಮರ‍್ಪಾಡಾಗುತ್ತಿದ್ದಾರೆ ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ ಇದನ್ನು ಮನಗಂಡ ರ‍್ಕಾರ ವಿದ್ಯರ‍್ಥಿಗಳಿಗೆ ಕಾಲೇಜು ಹಂತದಲ್ಲಿಯೇ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಸಿದರೆ ಮುಂದಿನ ದಿನಗಳಲ್ಲಿ ಸ್ವಯಂ ಉದ್ಯೋಗವನ್ನು ಮಾಡಲು ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಈ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಕರ‍್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಗುಲ್ರ‍್ಗ ವಿಶ್ವವಿದ್ಯಾನಿಲಯಗಳಲ್ಲಿ ಮೊಟ್ಟ ಮೊದಲ ಬಾರಿಗೆ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದೆ ಈ ಕರ‍್ಯಕ್ರಮದ ಅಡಿ ವಿದ್ಯರ‍್ಥಿಗಳಿಗೆ ತರಗತಿಗಳನ್ನು ನಡೆಸುವುದಲ್ಲದೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತದೆ .ಹಾಗೆಯೇ ವಿದ್ಯರ‍್ಥಿಯ ಕಲಿಕಾ ಸಾರ‍್ಥ್ಯವನ್ನು ಅಳೆದು ಪ್ರಮಾಣ ಪತ್ರವನ್ನು ಸಹ ನೀಡಲಾಗುತ್ತದೆ. ಇದರಿಂದ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಉದ್ಯೋಗ ಅರಸಿ ಹೊರಟಾಗ ಈ ಪ್ರಮಾಣ ಪತ್ರಗಳು ರ‍್ಕಾರದಿಂದ ನೀಡುವುದರಿಂದ ವಿದ್ಯರ‍್ಥಿಗಳಿಗೆ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ .ಇದರ ಸದುಪಯೋಗವನ್ನು ಎಲ್ಲಾ ಅಂತಿಮ ರ‍್ಷದ ಪದವಿ ವಿದ್ಯರ‍್ಥಿಗಳು ಪಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿ ನವೀನ್ ಮಾತನಾಡಿ ಕೇವಲ ಪದವಿ ಶಿಕ್ಷಣ ಪಡೆದರೆ ಕೆಲಸ ದೊರೆಯುತ್ತದೆ ಎಂಬ ಮನೋಭಾವದಿಂದ ವಿದ್ಯರ‍್ಥಿಗಳು ಹೊರಬರಬೇಕು ತಮಗೆ ರ‍್ಕಾರದ ವತಿಯಿಂದಲೇ ಕೌಶಲ್ಯಗಳನ್ನು ಕಲಿಸಲು ತರ‍್ಮಾನಿಸಲಾಗಿದೆ ಅದಕ್ಕಾಗಿ ವಿಶ್ವವಿದ್ಯಾನಿಲಯದಲ್ಲಿ ವಿಷಯವಾರು ಪಠ್ಯಗಳನ್ನು ಸಿದ್ಧಪಡಿಸಿದ್ದು ನಮ್ಮ ರ‍್ನಾಟಕ ಕೌಶಲ್ಯ ಅಭಿವೃದ್ಧಿ ವತಿಯಿಂದ ಉತ್ತಮ ಬೋಧನೆ ಹಾಗೂ ಕಲಿಕೆಗೆ ಪೂರಕವಾದ ಸಾಮಗ್ರಿಗಳನ್ನು ಒದಗಿಸಿ ತರಬೇತಿ ನೀಡಲಾಗುವುದು ಗ್ರಾಮೀಣ ಪ್ರದೇಶದ ವಿದ್ಯರ‍್ಥಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದ್ದು ವಿದ್ಯರ‍್ಥಿಗಳು ಬೇಜವಾಬ್ದಾರಿತನ ತೋರದೆ ಆಸಕ್ತಿಯಿಂದ ಕಲಿತಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಈ ಸಂರ‍್ಭದಲ್ಲಿ ಕೃಷ್ಣಮರ‍್ತಿ ಚನ್ನಕೇಶವ ನವೀನ್ ತಿಪ್ಪೇಸ್ವಾಮಿ ಹಾಗೂ ಉಪನ್ಯಾಸಕರು ಹನುಮಂತಪ್ಪ ವಿದ್ಯರ‍್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Namma Challakere Local News
error: Content is protected !!