ಚಳ್ಳಕೆರೆ : ಅನ್ನ ಹಾಕಿ ಸಾಕಿದ ಯಜಮಾನನಿಗೆ ಪ್ರಾಣದ ಅಂಗು ತೊರೆದು ಹೋರಾಟ ನಡೆಸಿದ ಸ್ವಾನ, ನಿಯತ್ತಿಗೆ ಇನ್ನೊಂದು ಹೆಸರೆ ನಾಯಿ ಇಂತಹದೊAದು ನಾಯಿಯ ಕತೆಯಿದು
ಹೌದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ರೈತ ಡಾ.ಆರ್ ಎ.ದಯಾನಂದಮೂರ್ತಿ ತೋಟದಲ್ಲಿ ನಡೆದ ಘಟನೆ ಇದು.
ರೈತ ಡಾ.ಆರ್.ಎ.ದಯಾನಂದ ಮೂರ್ತಿ ತೋಟದಲ್ಲಿ ಕೆಲಸ ಮುಗಿಸಿ ಬೆಸಿಗೆಯ ಬಿಸಿಲಿಗೆ ಮಾವಿನ ಮರದಡಿ ವಿಶ್ರಾಂತಿ ಪಡೆಯುತ್ತ ನಿದ್ರೆಗೆ ಜಾರಿದ್ದಾರೆ.
ಇಂತಹ ಸಮಯದಲ್ಲಿ ನಾಗರಹಾವೊಂದು ರೈತನ ಕಡೆ ಬರಲು ಆರಂಬಿಸಿದೆ, ಆದರೆ ರೈತನ ಸಾಕು ನಾಯಿ ಜಾನಿ ತನ್ನ ಯಜಮಾನ ನ ಕಡೆ ಹಾವು ನುಸಳದಂತೆ ಅಡ್ಡಗಟ್ಟಿ ಬೊಗಳುತ್ತಾ ಚೀರುತ್ತ ನಾಗರ ಹಾವನ್ನು ಹಿಮ್ಮೆಟ್ಟಿಸಿದೆ.
ಇನ್ನೂ ಸಾಕು ನಾಯಿ ಜಾನಿ ಬೊಗಳುವುದನ್ನು ಕೇಳಿಸಿಕೊಂಡ ರೈತ ದಯಾನಂದ ಮೂರ್ತಿ ನಿದ್ದೆಯಿಂದ ಮೇಲೆದ್ದು ನೋಡಿದರೆ ನಾಗರಹಾವೊಂದು ಎಡೆ ಬಿಚ್ಚಿಕೊಂಡು ನಾಯಿ ಜಾನಿ ಯೊಡನೆ ಕಾಳಗದಲ್ಲಿ ತೊಡಗಿದ್ದು, ನೋಡಿದ ದಯಾನಂದ ಮೂರ್ತಿ, ತನ್ನ ಪ್ರಾಣ ಉಳಿಸಿದ ನಾಯಿಗೆ ಧನ್ಯವಾದಗಳನ್ನುಅರ್ಪಿಸುತ್ತಾ ದೇವರನ್ನು ನೆನೆದ್ದಿದ್ದಾರೆ.
ಇನ್ನೂ ಈ ದೃಶ್ಯಗಳನ್ನು..ತಮ್ಮ ಮೊಬೈಲ್ ನಲ್ಲಿ ನಾಗರ ಹಾವು, ಹಾಗೂ ನಾಯಿ ಕಾಳಗದ ದೃಶ್ಯವನ್ನು ಸೆರೆಯಿಡಿದಿದ್ದಾನೆ. ಇನ್ನೂ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ರೈತ ಡಾ.ಆರ್.ಎ. ದಯಾನಂದ ಮೂರ್ತಿ, ನಾಯಿ ಬೊಗಳುವ ಶಬ್ದವನ್ನು ಕೇಳಿ ಎಚ್ಚರಗೊಂಡು ನೋಡಿದಾಗ ದೊಡ್ಡ ನಾಗರ ಹಾವು ನಾಯಿ ಮುಂದೆ ಹೆಡೆ ಎತ್ತಿ ಬುಸು ಗುಟ್ಟುತ್ತಿದೆ ಆದರೆ ತನ್ನ ಕಡೆ ಬರುವುದನ್ನು ಗಮನಿಸಿದ ನಾಯಿ ನನ್ನ ಕಡೆ ಬಿಡದೆ ತಡೆದು ವಾಪಸ್ಸು ಹೋಗುವಂತೆ ಚಿರಾಡಿದೆ, ಹಾವನ್ನು ತಡೆದ ನಾಯಿ ನಿಯತ್ತನ್ನು ಬರೀ ಮಾತಲ್ಲಿ ಹೇಳಲು ಸಾದ್ಯವಿಲ್ಲ ಎಂದಿದ್ದಾರೆ.