ಚಳ್ಳಕೆರೆ : ಬೆಳಂ ಬೆಳ್ಳಿಗ್ಗೆ ಟಿವಿ ಶೋ ರೂಮ್ ನಲ್ಲಿ ಅಗ್ನಿ ಅವಘಡ ಲಕ್ಷಾಂತರ ರೂಪಾಯಿ ನಷ್ಟ
ಹೌದು ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಟಿವಿ, ಶೋ ರೂಮ್ ನಲ್ಲಿ ಅಗ್ನಿ ಅವಘಡವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಗೃಹಬಳಕೆ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಚಳ್ಳಕೆರೆ ನಗರದ ಶ್ರೀಕಂಠಟೇಶ್ವರ ಟಿವಿ ಲಿಂಕ್, ಗೃಹ ಬಳಕೆಯ ಶೋರೂಮ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಈ ಘಟನೆ ಜರುಗುದೆ ಎನ್ನಲಾಗಿದೆ.
ಶೋ ರೂಮ್ ನಲ್ಲಿದ್ದಂತಹ ಬೆಲೆಬಾಳುವ ವಸ್ತುಗಳಾದ ಎಲ್ ಇಡಿ ಟಿವಿ. ಪ್ರಿಡ್, ವಾಷಿಂಗ್, ಮಶೀನ್, ಮಿಕ್ಸರ್ ಪ್ಯಾನ್ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಎಲೆಕ್ನಿಕ್ ವಸ್ತುಗಳು ಸುಟ್ಟು ಕರಕಲಾಗಿವೆ