ಚಳ್ಳಕೆರೆ ನ್ಯೂಸ್ :
ಮದುವೆ ಮನೆಯಲ್ಲಿ ಊಟ ಮಾಡಿದ್ದ 100 ಕ್ಕೂ ಹೆಚ್ಚು ಜನರು
ಅಸ್ವಸ್ಥರಾದ ಘಟನೆ, ಹೊಳಲ್ಕೆರೆ ಕ್ಷೇತ್ರದ ಕಾಲ್ಕೆರೆಯಲ್ಲಿ ನೆಡೆದಿದ್ದು
ತಡವಾಗಿ ಬೆಳಕಿಗೆ ಬಂದಿದೆ.
ಕಾಲ್ಕೆರೆಯ ಸಣ್ಣ ರುದ್ರಪ್ಪ ಮಗಳ
ಮದುವೆಯಲ್ಲಿ ಊಟ ಮಾಡಿದವರಲ್ಲಿ ವಾಂತಿಬೇಧಿ, ಸುಸ್ತು
ಕಾಣಿಸಿಕೊಂಡಿದೆ.
ಅಸ್ವಸ್ಥರನ್ನು ಭರಮಸಾಗರ, ದಾವಣಗೆರೆ
ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾವುದೇ ಪ್ರಾಣಾಪಾಯವಾಗಿಲ್ಲವೆಂದು ಪೊಲೀಸರು
ತಿಳಿಸಿದ್ದಾರೆ.