ಚಳ್ಳಕೆರೆ ನ್ಯೂಸ್ :
ಬಿರು ಬೀಸಿಲ ಬೇಸಿಗೆಯಲ್ಲಿ ಕೆಂಡದಂತೆ ಕಾದ ರಸ್ತೆಗಳು, ಒಂದೆಡೆಯಾದರೆ
ಸೂಸುವ ಬಿಸಿಗಾಳಿ, ಇದನ್ನೊಂದೆಡೆ ಈಗೇ ಇಂತಹ ಅನುಭವವನ್ನು ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಮಾತ್ರ ಕಾಣಬಹುದಾಗಿದೆ.
ಇಂತಹ ಬಿಸಿಲಿನ ಒಡೆತ ತಪ್ಪಿಸಿಕೊಳ್ಳಲು ಕಾಲೇಜಿನ ಯುವತಿಯರು ತಲೆ ಮೇಲೆ ಬಟ್ಟೆಯ ವೇಲು ಒದಿಸಿಕೊಳ್ಳುವ ಮೂಲಕ ನೆರಳಿನ ಆಶ್ರಯ ಪಡೆದಿದ್ದಾರೆ.
ಇನ್ನೂ ಉರಿ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಯುವತಿಯರು ಕರವಸ್ತ್ರದ ಮೊರೆ ಹೋಗಿರುವುದು ನಿಜಕ್ಕೂ ಸೋಜಿಗ..
ಇನ್ನೂ ಗ್ರಾಮೀಣ ಪ್ರದೇಶಗಳಿಂದ ನಗರದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ನೆಹರು ವೃತ್ತದಿಂದ ಕಾಲೇಜಿಗೆ ಹೋಗುವ ಮಾರ್ಗದ ಉದ್ದಕ್ಕೂ ಯಾವುದೇ ನೆರಳಿನ ಆಶ್ರಯ ಇಲ್ಲದೆ ಇರುವುದರಿಂದ ಬಿಸಿಲಿನಲ್ಲಿ ನಡೆದುಕೊಂಡು ಹೋಗಬೇಕಿದೆ.
ಇನ್ನೂ ನಗರದಲ್ಲಿ ಪುಟ್ ಬಾತ್ ವ್ಯಾಪ್ತಿರಿಗಳ ಆಕ್ರಮಣದಿಂದ ನಗರದಲ್ಲಿ ಪುಟ್ ಬಾತ್ ಕಾಣೆಯಾಗಿದೆ.
ಇದರಿಂದ ನಗರದ ಕಾಲೇಜ್ ಗಳಿಗೆ ಬರುವ ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯವೂ ರಸ್ತೆ ಮೇಲೆಯೇ ನಡೆದುಕೊಂದು ಹೋಗಬೇಕಿದೆ
ಇನ್ನೂ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಕೂಡಿದ್ದರು ಅನಿವಾರ್ಯವಾಗಿ ರಸ್ತೆಮೇಲೆ ನಡೆದುಕೊಂಡು ಹೋಗಬೇಕಿದೆ..