ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಘಟಕದಿಂದ
ಡಿಕೆ ಶಿವಕುಮಾರ್ ವಜಾಕ್ಕೆ ಒತ್ತಾಯಿಸಿ ಜೆಡಿಎಸ್
ಪ್ರತಿಭಟನೆ ನಡೆಸಿದರು.
ಪೆನ್ ಡ್ರೈವ್ ಹಗರಣದಲ್ಲಿ ಅಶ್ಲೀಲ ದೃಶ್ಯಗಳನ್ನು ಹಂಚುವ
ಮೂಲಕ ಮಹಿಳೆಯರ ಮಾನ ಹರಾಜಾಕಿರುವ ಉಪಮುಖ್ಯಮಂತ್ರಿ
ಡಿ.ಕೆ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡುವಂತೆ
ಒತ್ತಾಯಿಸಿ ಜಿಲ್ಲಾಧಿಕಾರಿ
ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ವೃತ್ತದ ಬಳಿ
ಮಾನವ ಸರಪಳಿ ನಿರ್ಮಿಸಿ, ಪ್ರತಿಭಟಿಸಿದ ಜೆಡಿಎಸ್ ಮುಖಂಡರು,
ಸರ್ಕಾರದ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ
ಹಾಕಿದರು.
ನಂತರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.