ಚಳ್ಳಕೆರೆ
ಮಂತ್ರದಿಂದ ವಾಕ್ಯ ಶುದ್ದಿ: ಯೋಗದಿಂದ ದೇಹ ಸುದ್ದಿ: ಎಂಬ ಗಾದೆಯಂತೆ ಇಂದಿನ ಯುವ ಪೀಳಿಗೆ ಮಾನಸಿಕ ಒತ್ತಡದಿಂದ ದೇಹವನ್ನು ಅಶುದ್ಧ ಗೊಳಿಸಿಕೊಂಡಿದ್ದಾರೆ
ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಯುವಕರು ಉಚಿತ ಯೋಗ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಯೋಗ ಶಿಕ್ಷಕ ಶಿವ ನಾಗಪ್ಪ ಕರೆ ನೀಡಿದರು,
ಇವರು ನಗರದ ಸುಧಾಕರ್ ಕ್ರೀಡಾಂಗಣದ ಮುಂಭಾಗದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಯೋಗ ಕಲಿಯುವಂತೆ ಜನ ಜಾಗೃತಿ ಮೂಡಿಸಿ ಮಾತನಾಡಿದ ಇವರು,
ಇತ್ತೀಚಿನ ದಿನಗಳಲ್ಲಿ ಮನುಷ್ಯ ಮಾನಸಿಕ ಒತ್ತಡದಿಂದ ದೇಹದ ಮನಸ್ಸು ಉಲ್ಲಾಸವಿಲ್ಲದೆ ದಿನನಿತ್ಯದ ಗೆಂಜಾಟದಲ್ಲಿ ಬಿದ್ದು ಆರೋಗ್ಯದಲ್ಲಿ ಸೀಮಿತವಿಲ್ಲದೆ ನಾನಾ ರೀತಿಯ ಕಾಯಿಲೆಗೆ ತುತ್ತಾಗುತ್ತಿದ್ದು
ಅನಾರೋಗ್ಯದ ಕಡೆ ಕೊಂಡೊಯ್ಯುತ್ತಿದ್ದಾರೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಯುವಕರು ನಾಗರಿಕರು ಸೇರಿದಂತೆ ಯೋಗ ಕಲಿತು ರೋಗ ರೋಗ ಓಡಿಸಿ ಎಂಬ ಸಿದ್ಧಾಂತದಂತೆ
ಚಳ್ಳಕೆರೆ ನಗರದಲ್ಲಿ ಸಂಸಾರ ಸಂಘಟನೆ ಸೇವೆಯ ಮೂಲಕ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯು ಉಚಿತವಾಗಿ ಯೋಗ ಶಿಕ್ಷಣವನ್ನು ಹೇಳಿ ಕೊಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೇಸಿಗೆ ರಜೆ ಇರುವುದರಿಂದ ಯೋಗಭ್ಯಾಸವನ್ನು ಮೈಗೂಡಿಸಿಕೊಂಡು ದೇಹ ಹಾಗೂ ಮಾನಸಿಕ ಸ್ಥಿತಿಯನ್ನು ಸದೃಢ ಗೊಳಿಸಿ ಎಂದು ಕರೆ ನೀಡಿದರು
ಇನ್ನು ಈ ಸಂದರ್ಭದಲ್ಲಿ ಮಂಗಳವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಪತಂಜಲಿ ಯೋಗ ಶಿಕ್ಷಣದ ವತಿಯಿಂದ ಜನ ಜಾಗೃತಿ ಮೂಡಿಸಿದರು
ಇನ್ನು ಈ ವೇಳೆ
ಯೋಗ ಶಿಕ್ಷಕ ಮನೋಹರ್, ಬಾಬಣ್ಣ, ತಿಪ್ಪೇಸ್ವಾಮಿ, ಚಂದ್ರಣ್ಣ ,ವೈ ಎಸ್ ನಾಗರಾಜ್, ಮಹೇಶ್, ಆಶಕ್ಕ, ಮಣಿ ಅಕ್ಕ, CT ಮಾಸ್ಟರ್, ರಾಮಲಿಂಗಪ್ಪ, ತಿಪ್ಪೇಸ್ವಾಮಿ, ಸೇರಿದಂತೆ ಅನೇಕ ಯೋಗ ಪಟುಗಳು ಹಾಜರಿದ್ದರು