ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗದಲ್ಲಿ ಸಚಿವ ಡಿ.ಸುಧಾಕರ್‌ಗೆ ಗ್ರಾಮಸ್ಥರಿಂದ
ಪ್ರಶ್ನೆಗಳ ಸುರಿಮಳೆ ವಿಡಿಯೋ ವೈರಲ್
ಚಿತ್ರದುರ್ಗದ ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ
ಮತ್ತು ಬಗ್ಗನಡು ಕೆರೆಗಳಿಗೆ ನೀರು ಹರಿಸಲು ಹಲವು ವರ್ಷಗಳಿಂದ
ಒತ್ತಾಯಿಸಲಾಗುತ್ತಿದೆ.
ದಶಕಗಳಿಂದ ಇರುವ ನೀರಿನ ಸಮಸ್ಯೆ
ಬಗೆಹರಿಸಲು ವಿಫಲವಾಗಿದ್ದಾರೆಂದು ಆರೋಪಿಸಿ ಸಚಿವ ಡಿ
ಸುಧಾಕರ್ ರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಹಾಗುತ್ತಿದೆ.
ಮತದಾನ ಬಹಿಷ್ಕಾರ ಮಾಡಿದ್ದನ್ನು ಪ್ರಶ್ನಿಸಿದ ಸಚಿವರಿಗೆ
ಗ್ರಾಮಸ್ಥರಿಂದ ಪ್ರಶ್ನೆಗಳ ಸುರಿಮಳೆಯೇ ಆಯಿತು.
ಚಾನಲ್
ಮೂಲಕ ನೀರು ಹರಿಸುವುದಾಗಿ ಹೇಳಿದರೂ, ಗ್ರಾಮಸ್ಥರು
ಒಪ್ಪಲಿಲ್ಲ.
ಇದರಿಂದ ಸಚಿವರು ಪ್ರಶ್ನೆಗಳಿಗೆ ಉತ್ತರಿಸದೆ ಬಂದ ದಾರಿಗೆ ಸುಂಖವಿಲ್ಲವೆಂದು
ವಾಪಾಸ್ಸಾದರು.