ಚಳ್ಳಕೆರೆ;
ಹೈದರಬಾದಿನ ಸನ್‌ರೈಸ್ ಫೌಂಡೇಷನ್ ಕಂಪನಿ ಹಾಗೂ ಮಲ್ಲಾರಗಟ್ಟಿ ಶಂಕರ್ ಎನ್ನುವ ವ್ಯಕ್ತಿ ನಗರದ ಸಮುದಾಯ ನಿರ್ವಹಣಾ ಸಂಪನ್ಮೂಲ ಕೇಂದ್ರ ಸೇರಿದಂತೆ ಸುಮಾರು ೨೦ ಜಿಲ್ಲೆಗಳ ಎನ್‌ಜಿಒ ಸಂಸ್ಥೆಗಳಿಗೆ ತರಬೇತಿಗಳ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ ಮಾಡಲಾಗಿದೆ ಎಂದು ಸ್ಪೂರ್ತಿ ವಿಕಲಚೇತನ ಟ್ರಸ್ಟ್ ನ ಫೌಂಡೇಶನ್ ಸಂಸ್ಥಾಪಕರಾದ ತಿಪ್ಪಮ್ಮ ಆರೋಪಿಸಿದ್ದಾರೆ

ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿನ ಎನ್‌ಜಿಒ ಸಂಸ್ಥೆಯಲ್ಲಿ ವಂಚನೆಗೆ ಒಳಗಾದ ಎನ್‌ಜಿಒ ಸಂಸ್ಥೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಸಮೃದ್ದಿ ಸಂಘ, ಕೆಂಚಾಂಭ ಸಹಕಾರ ಸಂಘ, ಹರ್ಷವರ್ಧನ ಸ್ವಯಂ ಸಂಸ್ಥೆ, ಚೈತನ್ಯ ಮಹಿಳಾ ಮಂಡಳಿ, ಮೈರಾಡ ಸಂಸ್ಥೆ, ಚಿತ್ರದುರ್ಗದ ಸ್ಫೂರ್ತಿ ವಿಕಲಚೇತನರ ಟ್ರಸ್ಟ್, ಶಿವಮೊಗ್ಗದ ಶ್ರೀಗುರು ವಿದ್ಯಾಸಂಸ್ಥೆ ದಾವಣಗೆರೆಯ ನೀಲಕಂಠೇಶ್ವರ ಶಿಕ್ಷಣ ಟ್ರಸ್ಟ್ ಹೀಗೆ ಸುಮಾರು ೨೦ ಜಿಲ್ಲೆಗಳ ಎನ್‌ಜಿಒ ಸಂಸ್ಥೆಗಳಲ್ಲಿ ಟೈಲರಿಂಗ್, ಕಂಪ್ಯೂಟರ್ ತರಬೇತಿಗಳನ್ನು ನಡೆಸಲು ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಪ್ರತಿ ತರಬೇತಿಗೆ ದಾಖಲಾದ ಮಹಿಳೆಯರಿಂದ ವಂತಿಕೆ ಸಂಗ್ರಹ ಮಾಡಲಾಗಿದೆ. ತರಬೇತಿ ಮುಗಿದ ಬಳಿಕ ತರಬೇತಿದಾರರಿಗೆ ಟೈಲರಿಂಗ್ ಮಿಷನ್, ಕಂಪ್ಯೂಟರ್ ಟ್ಯಾಬ್ ಮತ್ತು ಮಾಸಿಕವಾಗಿ ವೇತನ ಕೊಡುವುದಾಗಿ ಒಪ್ಪಂದದಲ್ಲಿ ಹೇಳಲಾಗಿತ್ತು.

ಇದರ ಪ್ರಕಾರ ತಲಾ ಎನ್‌ಜಿಒ ಕಂಪನಿಗಳಿಗೆ ೫೦ರಿಂದ ೬೦ ಮಿಷನರಿ ಪರಿಕರ ಮತ್ತು ೯.೫೦ ಲಕ್ಷ ಹಣ ನೀಡಬೇಕಿದೆ. ಪತ್ರ ವ್ಯವಹಾರ ಮತ್ತು ಫೋನ್ ಸಂಪರ್ಕಕ್ಕೂ ಸಿಗದಂತೆ ಆಡಳಿತಾತ್ಮಕ ವ್ಯವಹಾರ ನಿಲ್ಲಿಸಿದ್ದಾರೆ.

ತರಬೇತಿ ಪಡೆದವರು ಎನ್‌ಜಿಒ ಸಂಸ್ಥೆಗಳ ಮುಂದೆ ಬಂದು ಸೌಲಭ್ಯಕ್ಕಾಗಿ ಗಲಾಟೆ ಮಾಡುತ್ತಿದ್ದಾರೆ ಎಂದರು.

Namma Challakere Local News
error: Content is protected !!