ಬೋಸೆದೇವರಹಟ್ಟಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ ಪಿಎಸ್ಐ 2 ಕುಮಾರ್
ನಾಯಕನಹಟ್ಟಿ:: ಸಮೀಪದ
ಬೋಸೆದೇವರಹಟ್ಟಿಯಲ್ಲಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ 2 ಕುಮಾರ್ ಹೇಳಿದ್ದಾರೆ.
ಅವರು ಸೋಮವಾರ ಬೋಸೆದೇವರಹಟ್ಟಿ ಗ್ರಾಮದ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟದ ಬಗ್ಗೆ ಪರಿಶೀಲನೆಯನ್ನು ನಡೆಸಿದರು ಎಲ್ಲಿಯೂ ಸಹ ಅಕ್ರಮ ಮಧ್ಯ ಸಿಗದ ಕಾರಣ ಗ್ರಾಮಸ್ಥರೊಂದಿಗೆ ಸಭೆಯನ್ನು ನಡೆಸಿ ಮಾತನಾಡಿದರು.
ಗ್ರಾಮದಲ್ಲಿ ಯಾವುದೇ ಅಕ್ರಮ ಮಧ್ಯ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯುವಕರು ಮತ್ತು ಕೂಲಿಕಾರ್ಮಿಕರು ಸೇರಿದಂತೆ ಮಧ್ಯಪಾನ ಮಾಡುವುದು ಹೆಚ್ಚಾಗಿ ಕಂಡುಬರುತ್ತದೆ ನಿನ್ನೆ ಭಾನುವಾರ ಗ್ರಾಮಸ್ಥರು ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಪ್ರತಿಭಟನೆ ನಡೆಸಿದ ಪ್ರಯುಕ್ತ ಇಂದು ಗ್ರಾಮಕ್ಕೆ ಭೇಟಿ ನೀಡಲಾಗಿದೆ ಆದ್ದರಿಂದ ಗ್ರಾಮದ ಯುವಕರು ಮತ್ತು ಕೂಲಿ ಕಾರ್ಮಿಕರು ಮಧ್ಯಪಾನ ಮಾಡಬೇಡಿ ಗ್ರಾಮದಲ್ಲಿ ಯಾರಾದರೂ ಅಕ್ರಮ ಮಧ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ನಮ್ಮ ಗಮನಕ್ಕೆ ತನ್ನಿ ಗ್ರಾಮಸ್ಥರು ಪೊಲೀಸರೊಂದಿಗೆ ಸಾಕಾರ ನೀಡಲಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವುದು ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಪಿ. ಓಬಯ್ಯ, ಮಲ್ಲಕ್ ಬೋರಯ್ಯ, ಮಾಜಿ ಸೈನಿಕ ರಂಗಪ್ಪ, ಬೋರೇಶ್, ಗಂಡಯ್ಯ, ರಂಗಸ್ವಾಮಿ ಕೆ ಓ ಶಿವ ಸ್ವಾಮಿ, ಚಿನ್ನೋಬಯ್ಯ, ಪ್ರಭುಸ್ವಾಮಿ, ಪೊಲೀಸರಾದ ಭಾಷಾ, ದೇವರಾಜ್ ಕೋಟೆ , ಇದ್ದರು