ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ
ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ


ಬಾಬುರೆಡ್ಡಿ(೪೪) ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ
ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ
ವರದಿಯಾಗಿದೆ.

ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿರುವ
ಬಾಬುರೆಡ್ಡಿಯವರ ತಂದೆ ಹನುಮಂತರೆಡ್ಡಿ ಕಾಲುವೇಹಳ್ಳಿ ಗ್ರಾಮದ
ರಿ.ಸರ್ವೆ ನಂ. ೧೮೩/೨ರಲ್ಲಿ ೬ ಎಕರೆ ಜಮೀನಿನಲ್ಲಿ ನನ್ನ ಮಗ
ಬಾಬುರೆಡ್ಡಿ ಶೇಂಗಾ, ಮೆಕ್ಕೆಜೋಳ, ತೊಗರಿಯನ್ನು ಬಿತ್ತನೆ ಮಾಡಿದ್ದ
ಮಳೆಬಾರದ ಕಾರಣ ಜಮೀನಿನಲ್ಲಿ ಇದ್ದ ಬೆಳೆಗೆ ಟ್ಯಾಂಕರ್ ಮೂಲಕ
ನೀರು ಹಾಯಿಸಿ ಬೆಳೆಯನ್ನು ಉಳಿಸಿಕೊಳ್ಳಲು ಸ್ನೇಹಿತರು,
ಬಳಿ ಕೈಗಡ ಸುಮಾರು ೫ ಲಕ್ಷ ಸಾಲ ಮಾಡಿ ಫಸಲಿಗೆ ನೀರು
ಹಾಯಿಸಿದ್ದ ಫಸಲು ಬಾರದ ಕಾರಣ ಸಾಲ ತೀರಿಸಲು
ಚಿಂತೆಗೀಡಾಗಿದ್ದ ಬಾಬುರೆಡ್ಡಿ ಶನಿವಾರ ರಾತ್ರಿ ೭.೩೦ರ ಸುಮಾರಿನಲ್ಲಿ
ಮನೆಯಲ್ಲೇ ವಿಷ ಸೇವಿದನ್ನು ಪತ್ನಿ ಶ್ವೇತ ಗಮನಿಸಿ ಕೂಡಲೇ
ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು.

ಅಲ್ಲಿಂದ ಚಿತ್ರದುರ್ಗ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಕೊಡಿಸಿ,
ಭಾನುವಾರ ಸಂಜೆ ದಾವಣಗೆರೆ ಆಸ್ಪತ್ರೆಗೆ ಕರೆದ್ಯೋಯುವ
ಮಾರ್ಗಮದ್ಯದಲ್ಲಿ ಬಾಬುರೆಡ್ಡಿ ಸಾವನಪ್ಪಿರುತ್ತಾರೆ.

ಅತ್ತ ಮಳೆಯು ಇಲ್ಲದೆ, ಬೆಳೆಯೂ ಕೈಸೇರದ ಕಾರಣ ನನ್ನ ಮಗ
ಕೃಷಿಗಾಗಿ ಮಾಡಿದ್ದ ೫ ಲಕ್ಷ ಸಾಲವನ್ನು ಹೇಗೆ ತೀರಿಸಬೇಕು ಎಂಬ
ಚಿಂತೆಯಲ್ಲಿ ಮಾನಸಿಕವಾಗಿ ನೊಂದು ವಿಷ ಸೇವಿಸಿ ಆತ್ಮಹತ್ಯೆ
ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ
ಮುಂದುವರೆಸಿದ್ದಾರೆ. ಕೃಷಿಯನ್ನೇ ನೆಚ್ಚಿಕೊಂಡು ಜೀವನ
ಸಾಗಿಸುತ್ತಿರುವ ಎಷ್ಟೋ ರೈತರು ಸಾಲ ಸೋಲ ಮಾಡಿ ಕೃಷಿಯಲ್ಲಿ
ತೊಡಗುತ್ತಾರೆ.

ಮಳೆಯನ್ನೇ ನೆಚ್ಚಿಕೊಂಡು ಕೈಗಡ, ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದ ಎನ್ನಲಾಗಿದೆ.

About The Author

Namma Challakere Local News
error: Content is protected !!