ಸು.260ಮತಗಟ್ಟೆಗಲ್ಲಿ ಒಟ್ಟಾರೆ 1180 ಸಿಬ್ಬಂದಿಗಳು ಕರ್ತವ್ಯ :9 ವಿಶೇಷ ಮತಗಟ್ಟೆಗಳು : ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್

ಚಳ್ಳಕೆರೆ : ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮತಗಟ್ಟೆಗೆ ತೆರಳಲು ಸುಮಾರು 53 ಬಸ್ ಗಳು, 3 ಜೀಪ್ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದ್ದಾರೆ,
ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಡಿ.ಮಸ್ಟರಿಂಗ್ ಹಾಗೂ ಮತಗಟ್ಟೆಗೆ ತೆರಳುವ ಸಿಬ್ಬಂದಿಯ ವ್ಯವಸ್ಥೆಯನ್ನು ಪರೀಶಿಲಿಸಿ ಮಾಧ್ಯಮದೊಟ್ಟಿಗೆ ಮಾತನಾಡಿದರು. ಇನ್ನೂ ಸುಮಾರು 60 ಮಾರ್ಗಗಳ ಮೂಲಕ ಸಿಬ್ಬಂದಿ ತೆರಳಲಿದ್ದಾರೆ, ಸುಮಾರು260 ಮತಗಟ್ಟೆಗಲ್ಲಿ ಒಟ್ಟಾರೆ 1180 ಸಿಬ್ಬಂದಿಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವರು ಎಂದಿದ್ದಾರೆ.
ಇನ್ನೂ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, 2024 ರ ಲೋಕಸಭಾ ಚುನಾವಣೆಗೆ ಚಳ್ಳಕೆರೆ ನಗರದಿಂದ ನಿಯೋಜನೆಗೊಂಡ ಸಿಬ್ಬಂದಿಗಳು ಇಂದು ಮತಗಟ್ಟೆಗೆ ತೆರಳಿದ ತಕ್ಷಣ ಮತಗಟ್ಟೆಯಲ್ಲಿ ಪರಿಕರಗಳ ಸುರಕ್ಷತೆಯಿಂದ ಇರಿಸುವುದು, ಹಾಗೂ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಸುಮಾರು 9 ಮತಗಟ್ಟೆಗಳನ್ನು ವಿಶೇಷ ಮತಗಟ್ಟೆಗಳನ್ನಾಗಿ ಮಾಡಿದೆ, 5ಸಖಿ ಮತಗಟ್ಟೆಗಳನ್ನು ನಗರದ ಉರ್ದುಶಾಲೆ, ಕಾಟಪನಹಟ್ಟಿ ಶಾಲೆ, ಹುಲಿಕುಂಟೆ ಶಾಲೆ, ಸಿದ್ದಾಪುರ ಹಾಗೂ ಪರುಶುರಾಂಪುರ ಶಾಲೆಯಲ್ಲಿ ಮಾಡಲಾಗಿದೆ, ಇನ್ನೂ ವಿಶೇಷ ಚೇತನ ಮತಗಟ್ಟೆಯನ್ನು ನಗರದ ವಿಶ್ವಭಾರತಿ ಶಾಲೆಯಲ್ಲಿ ಮಾಡಿದರೆ, ಯಂಗ್ ಮತಟ್ಟೆಯನ್ನು ನಗರದ ನವಚೇತನ ಶಾಲೆಯಲ್ಲಿ ಮಾಡಿದೆ,ಇನ್ನೂ ಹರಿಜನ ಗಿರಿಜನ ಬುಡಕಟ್ಟು ಸಂಪ್ರಾದಾಯಕ್ಕೆ ಸಂಬAಧಿಸಿದAತೆ ನನ್ನಿವಾಳದಲ್ಲಿ ಮಾಡಿದೆ ಇನ್ನೂ ತಾಲೂಕಿನ ಮಾದರಿಗೆ ದ್ಯೇಯ ಮತಗಟ್ಟೆ ಸರಕಾರಿ ಪದವಿ ಪೂರ್ವ ಪಿಯು ಕಾಲೇಜಿನಲ್ಲಿ ಮಾಡಿದೆ ಎಂದರು.

ಇದೇ ಸಂಧರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್, ತಹಶೀಲ್ದಾರ್ ರೇಹಾನ್ ಪಾಷ, ಬಿಡಿಓ ಕೆ.ಎಸ್.ಸುರೇಶ್, ಆಹಾರ ಶಾಖೆಯ ಶ್ರೀನಿವಾಸ್, ಚುನಾವಣೆ ಶಾಖಾ ಅಧಿಕಾರಿಗಳು ಸಿಬ್ಬಂದಿ ಶ್ರೀಧರ್, ಕಂದಾಯ ಅಧಿಕಾರಿ ಲಿಂಗೇಗೌಡ, ಪ್ರಕಾಶ್, ಇತರ ಸಿಬ್ಬಂದಿ ಹಾಜರಿದ್ದರು.

About The Author

Namma Challakere Local News
error: Content is protected !!