ಮತಗಟ್ಟೆಗೆ ತೆರಳುವ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ :
ಜಿಲ್ಲೆಯಲ್ಲಿ 9 ಸಾವಿರ ಸಿಬ್ಬಂದಿ ಆಯೋಜನೆ : ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ
ಚಳ್ಳಕೆರೆ ನ್ಯೂಸ್ : 2024ರ ಲೋಕಸಭಾ ಚುನಾವಣೆಗೆ ಏ.26 ರಂದು ನಡೆಯುವ ಮತದಾನಕ್ಕೆ ಜಿಲ್ಲಾದ್ಯಾಂತ ಸು.9 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ, ಮತಗಟ್ಟೆಗೆ ತೆರಳುವ ಸಿಬ್ಬಂದಿಗೆ ಸೂಕ್ತವಾದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು.
ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಡಿ.ಮಸ್ಟರಿಂಗ್ ಹಾಗೂ ಮತಗಟ್ಟೆಗೆ ತೆರಳುವ ಸಿಬ್ಬಂದಿಯ ವ್ಯವಸ್ಥೆಯನ್ನು ಪರೀಶಿಲಿಸಿ ಮಾಧ್ಯಮದೊಟ್ಟಿಗೆ ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯ 6ವಿಧಾನಸಭಾ ಕ್ಷೇತ್ರ ಹಾಗೂ ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 8.ವಿಧಾನ ಸಭಾ ಕ್ಷೇತ್ರಗಳು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ, ಅದರಂತೆ ಒಟ್ಟಾರೆ 2,168 ಮತಗಟ್ಟೆಗಳು ಇವೆ ಎಂದರು.
ಸಿಬ್ಬAದಿಗಳು ಕರ್ತ್ಯವ್ಯ ಸ್ಥಳದಿಂದ ಬರಲು ಸಾರಿಗೆ ವ್ಯವಸ್ಥೆ :
ಜಿಲ್ಲೆಯ ಯಾವುದೇ ತಾಲೂಕಿನಿಂದ ಒಂದೆಡೆಯಿAದ ಮತ್ತೊಂದೆಡೆಗೆ ಬರಲು ಸಾರಿಗೆ ವ್ಯವಸ್ಥೆ ಹಾಗೂ ಟಿಪನ್ ಹಾಗೂ ಊಟದ ವ್ಯವಸ್ಥೆ, ಆರೋಗ್ಯ ಕಾಳಜಿಗೆ ಮೆಟಿಕಲ್ ಕಿಟ್ ಹಾಗೂ ವೈದ್ಯರ ನೇಮಕ, ಮಾಡಲಾಗಿದೆ ಬಿಸಿಲಿನ ತಾಪಮಾನ ಜಾಸ್ತಿ ಇರುವುದರಿಂದ ಸನ್‌ಸ್ಟೊçÃಕ್ ಇತರೆ ಖಾಯಿಲೆಗಳ ಮುಂಜಾಗ್ರತ ಕ್ರಮವಾಗಿ ಮಸ್ಟರಿಂಗ್ ಕೇಂದ್ರದಲ್ಲಿ ಮೆಟಿಕಲ್ ಕಿಟ್, ನೆರಳಿನ ವ್ಯವಸ್ಥೆ. ತಾತ್ಕಲಿಕ ಆರೋಗಯ ತಪಾಸಣೆಗೆ ಸಿದ್ದಂತೆ ಮಾಡಲಾಗಿದೆ.ಇನ್ನೂ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಇಸಿಎಲ್ ಇಂಜಿನಿಯಾರ್ ಗಳನ್ನು ನೇಮಕ ಮಾಡಲಾಗಿದೆ.
ವಿಶೇಷ ಮತಗಟ್ಟೆ :
ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಐದು ಸಖಿ ಮತಗಟ್ಟೆಗಳು, ಹೆಣ್ಣು ಮಕ್ಕಳೆ ನಿರ್ವಾಹಣೆ ಮಾಡುವಂತ ಮತಗಟ್ಟೆಗಳು ಮಾಡಲಾಗಿದೆ, ಇನ್ನೂ ಯಂಗ್ ಮತಗಟ್ಟೆಯಲ್ಲಿ ಯುವಕರೆ ನಿರ್ವಾಹಣೆ, ಇನ್ನೂ ವಿಕಲ ಚೇತನರ ಮತಗಟ್ಟೆಯಲ್ಲಿ ಪಿಡ್ಲೂö್ಯಡಿ ವಿಶೇಷ ಚೇತನರು ನಿರ್ವಹಣೆ, ಯತಿಕ್, ಬುಡಕಟ್ಟು ಸಂಪ್ರದಾಯಕ ಮತಗಟ್ಟೆ, ಜೊತೆಗೆ ಟರ್ನ ಓಟ್ ಮಾಡಿರುವ ಸಂಧರ್ಭದಲ್ಲಿ ಶೇ.4ರಷ್ಟು ಮತದಾನ ಹೆಚ್ಚಳಕ್ಕೆ ಆಧ್ಯತೆ ನೀಡಲಾಗಿದೆ.
ಮತಗಟ್ಟೆ ಸಿಬ್ಬಂದಿಗೆ ನೋಡೆಲ್ ಅಧಿಕಾರಿ :
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆ ಸಿಬ್ಬಂದಿಗಳ ಯೋಗ ಕ್ಷೇಮಕ್ಕೆ ಸ್ಥಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಮಹಿಳಾ ಸಿಬ್ಬಂದಿಗೆ ಸುರಕ್ಷತೆಗೆ ಸಿಡಿಪಿಓರನ್ನು ನೋಡೆಲ್ ಅಧಿಕಾರಿಗೆ ನೇಮಕ ಮಾಡಿಲಾಗಿದೆ.
ಸ್ಥಳಿಯ ಮತಗಟ್ಟೆ ಸಿಬ್ಬಂದಿಗೆ ಇಡಿಸಿ :
ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಅಧಿಕಾರಿಗಳಿಗೆ ಇಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದೆ ಇನ್ನೂ ಹೊರಗಿನ ಮತಗಟ್ಟೆ ಸಿಬ್ಬಂದಿಗೆ ಪೋಸ್ಟೆಲ್ ಬ್ಯಾಲೆಟ್ ನಮೂನೆ ನೀಡಿದೆ ಎಂದರು.
ಇದೇ ಸಂಧರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್, ತಹಶೀಲ್ದಾರ್ ರೇಹಾನ್ ಪಾಷ, ಬಿಡಿಓ ಕೆ.ಎಸ್.ಸುರೇಶ್, ಆಹಾರ ಶಾಖೆಯ ಶ್ರೀನಿವಾಸ್, ಚುನಾವಣೆ ಶಾಖಾ ಅಧಿಕಾರಿಗಳು ಸಿಬ್ಬಂದಿ ಶ್ರೀಧರ್, ಕಂದಾಯ ಅಧಿಕಾರಿ ಲಿಂಗೇಗೌಡ, ಪ್ರಕಾಶ್, ಇತರ ಸಿಬ್ಬಂದಿ ಹಾಜರಿದ್ದರು.