ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಪಟ್ಟಣದಲ್ಲಿ ಪುಲ್ ರೌಂಡ್ಸ್ ಎನ್ ವೈ ಎಚ್ ಸುಜಯ್.
ಬಡಜನರ ಬದುಕಿಗೆ ಜೀವ ತುಂಬಿದ ಕಾಂಗ್ರೆಸ್ ಎನ್ ವೈ ಎಚ್ ಸುಜಯ್ ಅಭಿಪ್ರಾಯ
ನಾಯಕನಹಟ್ಟಿ::. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಐದು ಗ್ಯಾರೆಂಟಿಗಳನ್ನ ಜಾರಿಗೊಳಿಸುವ ಮೂಲಕ ರಾಜ್ಯದ ಲಕ್ಷಾಂತರ ಜನರ ಬದುಕಿಗೆ ಜೀವ ತುಂಬಿದೆ ಎಂದು ಕಾಂಗ್ರೆಸ್ ಮುಖಂಡ ಎನ್ ವೈ ಎಚ್ ಸುಜಯ್ ಹೇಳಿದ್ದಾರೆ.
ನಾಯಕನಹಟ್ಟಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಪರ ಭರ್ಜರಿ ಮತಯಾಚನೆಯನ್ನು ಮಾಡಿ ಮಾತನಾಡಿದ ಅವರು ರಾಜ್ಯದ ಬಡ ಜನರಿಗಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಇದರಿಂದ ಬಡ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಕಷ್ಟು ಜನಪರ ಯೋಜನೆಗಳು ಜಾರಿಗೊಳಲಿವೆ ಕಾಂಗ್ರೆಸ್ ಸರ್ಕಾರ ಮಾತ್ರ ಶಾಶ್ವತ ಯೋಜನೆಗಳನ್ನ ಜಾರಿಗೊಳಿಸುತ್ತದೆ ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ಭದ್ರಾ ಮೇಲ್ದಂಡೆ ಎತ್ತಿನಹೊಳೆ ತುಂಗಭದ್ರ ಯೋಜನೆಗಳಿಗೆ ಸಾಕಷ್ಟು ಅನುದಾನವನ್ನ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ ಆದ್ದರಿಂದ ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗಾಗಿ ಪಟ್ಟಣ ಹಾಗೂ ಹೋಬಳಿಯ ಎಲ್ಲಾ ಮತದಾರರು ಏಪ್ರಿಲ್ 26ರಂದು ನಡೆಯಲಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ರವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಮುಖಂಡರಾದ ಎಸ್ ಎನ್ ತಿಪ್ಪೇಸ್ವಾಮಿ, ಸಿ ಬಿ ಮೋಹನ್ ಚೌಳಕೆರೆ, ಬಗರ್ ಹುಕುಂ ಕಮಿಟಿ ಸದಸ್ಯ ಪಿ ಜಿ ಬೋರ ನಾಯಕ, ಜಿ ಬಿ ಮುದಿಯಪ್ಪ, ಕೆ ಜಿ ಪ್ರಕಾಶ್, ವರವು ಕಾಟಯ್ಯ, ಶಂಕರ್ ಮೂರ್ತಿ, ರಾಮಸಾಗರ ಕಾಟಯ್ಯ, ಆರ್ ಬಸಪ್ಪ, ವಾಸಿಂ, ರೇಖಲಗೆರೆ ಅಶೋಕ್, ಹಿರೇಹಳ್ಳಿ ವಕೀಲ ಮಲ್ಲೇಶ್, ನಾಯಕನಹಟ್ಟಿ ಓಬಳೇಶ್, ಜೋಗಿಹಟ್ಟಿ ಎಚ್ ಬಿ. ತಿಪ್ಪೇಸ್ವಾಮಿ, ಎನ್ ಮಹದೇವಪುರ ಓಬಳೇಶ್, ಭೀಮನಕೆರೆ ಸುರೇಂದ್ರ, ಹಿರೇಹಳ್ಳಿ ತಿಪ್ಪೇಸ್ವಾಮಿ, ದುರುಗೇಶ್, ರುದ್ರಮುನಿ, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ಇದ್ದರು