ಚಳ್ಳಕೆರೆ ನ್ಯೂಸ್ : ಕಳೆದ ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿರುವ ಕೇಂದ್ರ ಸರ್ಕಾರ ಜನರ ಕೈಯಲ್ಲಿ ಚೆಂಬು ನೀಡುವ ಮೂಲಕ ಚೆಂಬುವಿನ ಸರಕಾರವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಬಿಜೆಪಿಯ ಕೇಂದ್ರ ಸರ್ಕಾರದ ವಿರುದ್ಧ ಹಾರಿಹಾಯ್ದಿದ್ದಾರೆ.
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನನ್ನಿವಾಳ ಜಿಪಂ. ಕ್ಷೇತ್ರದಲ್ಲಿ ನನ್ನಿವಾಳ ಎಕೆ ಕಾಲೋನಿಯಲ್ಲಿ ಲೋಕಸಭಾ ಚುನಾವಣೆಯ ಬಿಎನ್.ಚಂದ್ರಪ್ಪ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಜನರು ನೆಮ್ಮದಿಯಾಗಿ ಇದ್ದಾರೆ ಎಂದರೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮಾತ್ರ, ಇಂದು ಉಚಿತವಾಗಿ ಅನ್ನಭಾಗ್ಯ ಯೋಜನೆ, ಪ್ರೀ ಬಸ್ ಪಾಸ್, ಗೃಹ ಲಕ್ಷ್ಮೀ ಯೋಜನೆ ಈಗೇ ಬಡಜನರಿಗೆ ವರದಾನವಾಗಿವೆ ಆದ್ದರಿಂದ ಕೇಂದ್ರಕ್ಕೆ ನಮ್ಮ ಅಭ್ಯರ್ಥಿ ಚಂದ್ರಪ್ಪ ಕಳಿಸಿಕೊಂಡುವ ಜವಾಬ್ದಾರಿ ಮತದಾರರ ಮೇಲಿದೆ, ಆದ್ದರಿಂದ ಮತದಾರರ ಈಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದರು.
ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಒಕ್ಕೂಟ ಎಂಬುದು ಬರೀ ಬ್ರಂತಿ ಎಂದು ಲೇವಾಡಿ ಮಾಡಿದರು.
ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಪರಿಶಿಷ್ಟ ಜಾತಿ ವಿಭಾಗ ರಾಜ್ಯ ಉಪ ಅಧ್ಯಕ್ಷರು, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ, ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಅಧ್ಯಕ್ಷ ಜೆ.ಬಸವರಾಜ್ ನನ್ನಿವಾಳ,
ಸಿ ವಿ ಶ್ರೀಧರ್ ಹಾಗೂ ಚಿತ್ರದುರ್ಗ ಲೋಕಸಭಾ ಉತ್ಸುವರಿಗಳು, ಕೆ ಪಿ ಪಿಸಿ ಸಿ ರಾಜ್ಯ ಸಂಚಾಲಕರು ಹಾಗೂ ಚಳ್ಳಕೆರೆ ವಿಧಾನ ಸಭೆ ಉಸ್ತುವಾರಿಗಳ ಶಿವಕುಮಾರ ಟಿ. ,ಓಬಳೇಶ, ,ಗ್ರಾಮ.ಪ. ಸದಸ್ಯರು, ರುದ್ರೇಶ್ ಎಂ, ಗ್ರಾಮ ಪಂ ಸದಸ್ಯರು ಪ್ರಕಾಶ್ ಗ್ರಾಮ ಪಂ ಹಾಗೂ ಬ್ಲಾಕ್ ಪದಾಧಿಕಾರಿಗಳು, ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಸದಸ್ಯರು ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ನಗರಸಭಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ವಿವಿಧ ನಾಮನಿರ್ದೇಶನ ಸದಸ್ಯರುಗಳು ಸಾರ್ವಜನಿಕರು ಮುಖಂಡರು, ಕಾರ್ಯಕರ್ತರು ಉಪಸ್ಥಿತಿದ್ದರು.