ಕಾಂಗ್ರೆಸ್ ಇಂಡಿಯಾ ಒಕ್ಕೂಟವು ಈಗಾಗಲೇ ಒಡೆದು ಚೂರು ಚೂರಾಗಿದೆ: ಕಾರಜೋಳ ಲೆವಡಿ
ಚಳ್ಳಕೆರೆ
ಕಾಂಗ್ರೆಸ್ ಇಂಡಿಯಾ ಘಟಬಂಧನ್ ಈಗಾಗಲೇ ಒಡೆದು ಚೂರಾಗಿದೆ ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಸೋಲಿನ ಭೀತಿ ಎದುರಾಗಿದೆ ಎಂದು ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ್ ಲೇವಡಿ ಮಾಡಿದರು ,
ಇವರು ನಗರದ ವಾಲ್ಮೀಕಿ ವೃತ್ತದಿಂದ ತೆರೆದ ವಾಹನದಲ್ಲಿ ಸೋಮವಾರ ಸಂಜೆ ಬಿಜೆಪಿ ಹಾಗೂ ಜೆಡಿಎಸ್ ಮಿಶ್ರ ಪಕ್ಷ ಉದ್ದೇಶಿಸಿ ನೆಹರು ಸರ್ಕಲ್ ನಲ್ಲಿ ಮಾತನಾಡಿದ ಇವರು,
ಪ್ರಧಾನಿ ನರೇಂದ್ರ ಮೋದಿಜಿ ರವರು 23 ವರ್ಷಗಳ ಕಾಲ ಸಂವಿಧಾನಾತ್ಮಕ ನಿಲುವು ಕೈಗೊಂಡು ಒಂದು ಕಪ್ಪು ಚುಕ್ಕೆ ಇಲ್ಲದ ಹಾಗೆ ದೇಶದ ಅಭಿವೃದ್ಧಿಯನ್ನು ಹೆಚ್ಚಿಸಿದ್ದಾರೆ,
ಕೋವಿಡ್ ಸಂದರ್ಭದಲ್ಲಿ ೧೪೦ ಕೋಟಿ ಜನತೆಗೆ ವ್ಯಾಕ್ಸಿನ್ ಕೊಡಿಸಿ ಜನಗಳ ಪ್ರಾಣ ಉಳಿಸಿದ್ದಾರೆ ಅಲ್ಲದೆ ದೇಶದ ಆರ್ಥಿಕತೆಯನ್ನು ಹಾಗೂ ಮಿಲಿಟರಿ ಪಡೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರ ಗುರುವಾಗಿದ್ದಾರೆ,
ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿಯಾಗಲು ಉತ್ತಮ ಅಭ್ಯರ್ಥಿ ಇಲ್ಲ ಇನ್ನು ರಾಹುಲ್ ಗಾಂಧಿ ಪ್ರಧಾನಿಯಾಗಲಿಕ್ಕೆ ಬಸ್ಟ್ಯಾಂಡಿನಲ್ಲಿ ಹರಕು ಬಟ್ಟೆ ಹಾಕಿಕೊಂಡ ಅವರು ಕೂಡ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಲು ಒಪ್ಪುವುದಿಲ್ಲ ,
ಈ ನಿಟ್ಟಿನಲ್ಲಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದ ಪ್ರಧಾನಿ ನರೇಂದ್ರ ಮೋದಿಜಿ ಅವರ ಋಣವನ್ನು ನಾವು ನೀವೆಲ್ಲ ಒಂದು ಮತ ಹಾಕಿ ಬಿಜೆಪಿ ಪಕ್ಷಕ್ಕೆ ಚಿತ್ರದುರ್ಗ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸಿದರೆ ಬರುವ ದಿನಗಳಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯುತ್ತೇನೆ ಎಂದರು ,
ಇನ್ನು ಪ್ರಚಾರದ ವೇಳೆ ಕನ್ನಡದ ಚಲನಚಿತ್ರ ನಟಿ ರಾಗಿಣಿ, ಜೆಡಿಎಸ್ ಮುಖಂಡ ಪಿಟಿ ತಿಪ್ಪೇಸ್ವಾಮಿ, ಜೆಡಿಎಸ್ ಪರಾಜಿತ ಅಭ್ಯರ್ಥಿ ರವೀಶ್, ಕೆ ಟಿ ಕುಮಾರಸ್ವಾಮಿ, ಸೂರನಹಳ್ಳಿ ಶ್ರೀನಿವಾಸ್, ಸೇರಿದಂತೆ ಅನೇಕ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು