ಚಳ್ಳಕೆರೆ ನ್ಯೂಸ್ :
ಅವೈಜ್ಞಾನಿಕ ಹಂಪ್ಸ ನಿಂದಾಗಿ ಆಟೊ ಪಲ್ಟಿ ಐವರಿಗೆ
ಗಾಯ
ಚಿತ್ರದುರ್ಗದ ಎನ್ ಹೆಚ್ 4 ರ ಬಳಿ ಲೋಕೋಪಯೋಗಿ
ಇಲಾಖೆ ಅವೈಜ್ಞಾನಿಕವಾಗಿ ಹಾಕಿರುವ, ಹಂಪ್ ನಿಂದಾಗಿ ಆಟೋ
ಪಲ್ಟಿಯಾಗಿ ಐದು ಜನರಿಗೆ ಗಂಭೀರ ಗಾಯವಾಗಿರುವ ಘಟನೆ
ನಡೆದಿದೆ.
ಇಂಗಳದಾಳಿನಿಂದ ಚಿತ್ರದುರ್ಗಕ್ಕೆ ಬಂದು ಮಾರುಕಟ್ಟೆಗೆ
ಹೂ ಮಾರಾಟ ಮಾಡಿ ವಾಪಾಸ್ಸು ಹೋಗುವಾಗ ಘಟನೆ ನಡೆದಿದೆ.
ಗಾಯಗೊಂಡವರಲ್ಲಿ ಗರ್ಭಿಣಿ ಮಹಿಳೆಯು ಇದ್ದು, ಸೊಂಟದ
ಭಾಗಕ್ಕೆ ಹೆಚ್ಚು ಪೆಟ್ಟು ಬಿದ್ದಿದೆ.
ಗಾಯಗೊಂಡವರನ್ನು ಸರ್ಕಾರಿ
ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.