ಚಳ್ಳಕೆರೆ ನ್ಯೂಸ್ :
ಕಾಂಗ್ರೇಸ್ ಸರಕಾರ ನುಡಿದಂತೆ ನಡೆದಿದ್ದೇವೆ ಅಂತ ಹೇಳ್ತಾರೆ, ಆದರೆ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕೋಟ್ಯಾಂತರ ರೂ ಸಾಲ ಮಾಡುವ ಜತೆಗೆ ರಾಜ್ಯದ ಜನತೆ ಮೇಲೆ ಹೆಚ್ಚಿನ ತೆರಿಗೆ ಹೇರಿ ಜನ ಸಾಮಾನ್ಯರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದರು.
ಚಳ್ಳಕೆರೆ ತಾಲೂಕಿನ ಪರುಶುರಾಂಪುರ
ಗ್ರಾಮದ ಸಂತೆ ಮೈದಾನದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ,
ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಈಗಾಗಾಲೇ ಒಂದು ಲಕ್ಷದ ಐದುಸಾವಿರ ಕೋಟಿ ಸಾಲ ಮಾಡಿದ್ದಾರೆ. ಈ ಸಾಲವನ್ನು ಮುಂದೆ ಯಾವ ಸರಕಾರಗಳೂ ತೀರಿಸಲ್ಲ ಈ ಸಾಲವನ್ನ ನೀವುಗಳೇ.. ತೀರಿಸಬೇಕಿದೆ ಇದನ್ನು ಮಹಿಳೆಯರು ಮೊದಲು ಅರ್ಥ ಮಾಡಿಕೋಳ್ಳಬೇಕು ಎಂದರು.
೨೦೧೮ ರಲ್ಲಿ ನಾನು ಸಿಎಂ ಆದಾಗ ಬರಗಾಲದಿಂದ ರೈತರ ಆತ್ಮಹತ್ಯೆಯನ್ನ ಮನಗಂಡು ೨೫ ಸಾವಿರ ಕೋಟಿ ಸಾಲ ಮನ್ನಾಮಾಡಿದೆ. ಆದರೆ ಅಂದು ಖಜಾನೆ ಖಾಲಿಯಾಗಿದೆ ಎಂತ ಎಂದೂ ಕೇಂದ್ರ ಸರಕಾರಕ್ಕೆ ಹಣ ಕೇಳಿರಲಿಲ್ಲ. ನಾವು ಬಿಜೆಪಿ ಜತೆ ಹೋಂದಾಣಿಕೆ ಮಾಡಿಕೊಂಡಿದ್ದು ಮಂತ್ರಿ ಆಗಲಿಕ್ಕೆ ಅಲ್ಲ. ಕೇಂದ್ರದಲ್ಲಿ ಇನ್ನೂ ಹತ್ತು ವರ್ಷಕಳೆದರೂ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗದ ಹಿನ್ನೆಲೆಯಲ್ಲಿ ಈಗ ಅಧಿಕಾರ ನಡೆಸುವವರ ಜತೆ ಮೈತ್ರಿ ಮಾಡಿಕೊಂಡು ನಿಮ್ಮಗಳ ಕಷ್ಟಗಳಿಗೆ ಕೈಜೋಡಿಸುವುದು ನಮ್ಮ ಪಕ್ಷದ ಗುರಿಯಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಎಡರು ಪಕ್ಷದ ಕಾರ್ಯಕರ್ತರು ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡುಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.
ಮಾಜಿ ಪ್ರಧಾನ ದೇವೇಗೌಡ, ಯಡಿಯೂರಪ್ಪ ರಾಜ್ಯದಲ್ಲಿ ೨೮ ಕ್ಕೆ ೨೮ ಸ್ಥಾನ ಗೆಲ್ಲಲು ಎರಡು ಧೈತ್ಯಶಕ್ತಿಗಳಾಗಿ ಹೊರ ಹೊಮ್ಮಬೇಕಿದೆ.
ಕಾಂಗ್ರೇಸ್ ಪಕ್ಷದಲ್ಲಿ ಪ್ರಧಾನ ಆಗುವ ಅಭ್ಯರ್ಥಿಗಳು ಇಲ್ಲ. ಇಲ್ಲಿ ಜೈಲಿಗೆ ಹೋದವರು, ಬೇಲ್‌ಮೇಲೆ ಹೊರಬಂದು ಕೋರ್ಟಿ ಹೋಗುವವರೇ ಇದ್ದಾರೆ ಎಂದರು
ಈ ವೇಳೆ ವಿಧಾನ ಸಭಾ ಚುನಾವಣೆ ಪರಾಜಿತ ಅಭ್ಯರ್ಥಿ ರವೀಶ್, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಅನಿಲ್‌ಕುಮಾರ್ ಮಾತನಾಡಿದರು.
ಈ ವೇಳೆ ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ತಾಲೂಕು ಅಧ್ಯಕ್ಷ ಪಿ.ಟಿ.ತಿಪ್ಪೇಸ್ವಾಮಿ, ಮುಖಂಡರಾದ ಕೆ.ಟಿ.ಕುಮಾರ ಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, ಸೋಮಶೇಖರ್ ಮಂಡೀಮಠ, ಬಿ.ಎಸ್. ಶಿವಪುತ್ರಪ್ಪ, ಅನಿಲ್ ಕುಮಾರ್, ಬಾಳೆಕಾಯಿ ರಾಮದಾಸ್, ಆನಂದಪ್ಪ, ಜಯಪಾಲ್, ವೀರಭದ್ರಪ್ಪ, ವೆಂಕಟೇಶ, ರಂಗನಾಥ, ನಗರಸಭಾ ಸದಸ್ಯ ಪ್ರಮೋದ್ ಹಾಗೂ ಜೆಡಿಎಸ್ ಮತ್ತು ಬಿಜೆಪಿ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.