ಚಳ್ಳಕೆರೆ ನ್ಯೂಸ್ : ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆ ಇಂತಹ ಪ್ರದೇಶದಲ್ಲಿ ಕುಡಿಯುವ ನೀರಿಗೆ ತಾತ್ಪರ ಪಡುವ ಅನಿವಾರ್ಯತೆ ಇದೆ
ಆದ್ದರಿಂದ ಈ ಭಾಗದ ರೈತರಿಗೆ
ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು
ನೋಡಿಕೊಳ್ಳಬೇಕು
ಭೀಕರ ಬರಗಾಲ ಸುಡುಬಿಸಿಲು ಇದರಿಂದಾಗಿ ತಳಕು, ನಾಯಕನಹಟ್ಟಿ, ಪರಶುರಾಂಪುರ, ಈಗೇ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಖುವ ಮೊದಲೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರು ಕೊಡಬೇಕು.
ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಇತ್ತ ಗಮನಹರಿಸಿ ತಕ್ಷಣವೇ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ
ರೈತ ಸಂಘದ ಕಾರ್ಯದರ್ಶಿ ಚೌಳೂರ್ ಪ್ರಕಾಶ್ ಹೇಳಿದರು.
ಮಧ್ಯಮದೊಂದಿಗೆ ಮಾತನಾಡಿ, ಅಂತರ್ಜಲ ಮಟ್ಟ ಕುಸಿದಿದ್ದು
ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಇದರ ಹಿನ್ನೆಲೆಯಲ್ಲಿ
ಪಿಆರ್ ಪುರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಿದೆ.
ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದಿದ್ದಾರೆ.