ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಮಾಡಲು ಮತಗಟ್ಟೆ ಬರುವ ಮತದಾರರಿಗೆ ಆಕರ್ಷಣೆವಾಗಿರಲಿ ಎಂದು ಆಕರ್ಷಕ ವಾಗಿ ಚಿತ್ರ ಬಿಡಿಸಿದ ಚಳ್ಳಕೆರೆ ನಗರಸಭೆ ಅಧಿಕಾರಿಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು ಚಳ್ಳಕೆರೆ ನಗರದ ಬಿಇಒ ಕಚೇರಿ ಆವರಣದ ಸರ್ಕಾರಿ ಉರ್ದು ಶಾಲೆ ಮತ್ತು ಕಾಟಪ್ಪನಹಟ್ಟಿ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಚಿತ್ರಗಳನ್ನು ಬಿಡಿಸುವ ಮೂಲಕ ಆಕರ್ಷಕ ಎರಡು
ಸಖಿ ಮತಗಟ್ಟೆ ಕೇಂದ್ರಗಳನ್ನು ಮತಗಟ್ಟೆಗಳಾಗಿ ಸಿದ್ಧಗೊಳಿಸಲಾಗಿದೆ.

ಮತದಾನ ದಿನದಂದು ತಳಿರು ತೋರಣಗಳಿಂದ‌ ಮಧುವಣಗಿತ್ತಿಯಂತೆ ಸಿಂಗರಗೊಳಿಸಲಾಗುವುದು ಎಂದು ನಗರಸಭೆ‌ ಪೌರಾಯುಕ್ತ ಕೆ.ಜೀವನ್ ಕಟ್ಟಿಮನಿ ಹೇಳುತ್ತಾರೆ.

ಮತದಾನದಿಂದ ಯಾರೂ‌ ಕೂಡ ವಂಚಿತರಾಗದಂತೆ ಈಗಾಗಲೇ ‌ನಿಗಾ ವಹಿಸಿಲಾಗಿದೆ ಆಕರ್ಷಕ ಮತಗಟ್ಟೆಗಳ ಮೂಲಕ ಮತದಾರರನ್ನು ಸೇಳೆಯಲು ಸಖಿ ಮತಗಟ್ಟೆ ಮಾಡಲಾಗಿದೆ

ಒಟ್ಟಾರೆ ಚುನಾವಣೆಯ ತಾಲ್ಲೂಕು
ಸ್ವೀಪ್ ಸಮಿತಿ ಅಧ್ಯಕ್ಷ , ತಾಪಂ ಇಓ ಲಕ್ಷ್ಮಣ್ ಹಾಗೂ ನಗರಸಭೆ ಪೌರಾಯುಕ್ತ ಕೆ. ಜೀವನ್ ಕಟ್ಟಿಮನಿ ಹಾಗೂ ತಾಲೂಕು ಆಡಳಿತ
ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎನ್ನಲಾಗಿದೆ.

About The Author

Namma Challakere Local News
error: Content is protected !!