ಚಳ್ಳಕೆರೆ ನ್ಯೂಸ್ :
ಕಾರಜೋಳರನ್ನು ಗೆಲ್ಲಿಸಿದರೆ ನನ್ನನ್ನೆ ಗೆಲ್ಲಿಸಿದಂಗೆ:
ಬಿಎಸ್ ವೈ
ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿದರೆ ನನ್ನನ್ನೆ ಗೆಲ್ಲಿಸಿದಂಗೆ,
ಮುಂದಿನ ದಿನಗಳಲ್ಲಿ ಮದಕರಿ ಉತ್ಸವ ಮಾಡುತ್ತೇವೆ ಎಂದು
ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಚಿತ್ರದುರ್ಗದಲ್ಲಿ ವೀರಶೈವ ಲಿಂಗಾಯಿತ ಮುಖಂಡರ ಸಭೆ ಉದ್ಘಾಟಿಸಿ
ಮಾತಾಡಿದ ಅವರು
ಅಪ್ಪರ್ ಭದ್ರಾಗೆ 5300 ಕೋಟಿ ಹಣವನ್ನು ಕೊಡಲು
ವಿಳಂಬವಾಗಿದೆ.
ಆದರೆ ನಾನು ಈ ಹಣ ತರುತ್ತೇನೆ. ಕಾಂಗ್ರೆಸ್ ಮುಳುಗುವ ಹಡಗು, ಅವರಲ್ಲಿ ಯಾರಾದ್ರೂ ಹೇಳಲಿ, ಮುಂದಿನ ಪ್ರಧಾನಿಯಾಗುವ ಅಭ್ಯರ್ಥಿಯಾರೆಂದು, ಆದರೆ ಅವರಲ್ಲಿ ಯಾರೂ ಇಲ್ಲ, ಆದ್ದರಿಂದ ಅವರು ಹೇಳಲ್ಲ ಎಂದರು.
ಇನ್ನೂ ಚಿತ್ರದುರ್ಗ ವೀರಶೈವ ಲಿಂಗಾಯಿತ ಮುಖಂಡರ ಸಭೆ ಇಂದು
ಚಿತ್ರದುರ್ಗದಲ್ಲಿ ನಡೆಯಿತಾದರು ಈ ಸಭೆಯಲ್ಲಿ
ಯಡಿಯೂರಪ್ಪ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದ
ಹೊಳಲ್ಕೆರೆ ಶಾಸಕ, ಎಂ. ಚಂದ್ರಪ್ಪ ಗೈರಾಗಿದ್ದು ಎದ್ದು ಕಾಣುತ್ತಿತ್ತು.
ಪುತ್ರ ರಘು ಚಂದನ್ ಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ,
ಸ್ವಾಭಿಮಾನಿ ಸಮಾವೇಶ ನಡೆಸಿದ್ದ, ಚಂದ್ರಪ್ಪ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದರು ಎನ್ನಲಾಗಿದೆ.