ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯ ರೈತರು ಸಾಲ ಸೋಲ ಮಾಡಿ ಬಿತ್ತಿದ ಬೆಳೆಗೆ ವಿಮೆ ಕಟ್ಟಿದರೆ , ವಿಮಾ ಕಂಪನಿಗಳು ವಿಮೆ ಹಾಕಿದಾಗ ವಿಮೆ ಸಿಗಲಿಲ್ಲವಾದರೆ ಆ ರೈತನ ಪರಿಸ್ಥಿತಿ ಹೇಳತೀರದು
ಹೌದು ನಿಜಕ್ಕೂ ಶೋಚನೀಯ ಕಟ್ಟಿದ ವಿಮೆಯೂ ಕೈಗೆ ಸಿಗಲಿಲ್ಲವಾದರೆ ಆ ರೈತ ದಿನವಿಡೀ ಸರಕಾರಿ ಕಚೇರಿಗಳನ್ನು ಅಲೆದು ಸುಸ್ತಾಗಿದ್ದಾನೆ.
ಇನ್ನೂ ಗ್ರಾಮೊನ್ ಕೇಂದ್ರದ ಕಂಪ್ಯೂಟರ್ ಸೆಂಟರ್ ಮಾಡಿದ
ಯಡವಟ್ಟಿನಿಂದಾಗಿ ರೈತ ಬೆಳೆವಿಮೆ ಕಟ್ಟಿದರೂ ಸಹ
ವಂಚನೆಯಾಗಿರುವುದು ಬೆಳಕಿಗೆ ಬಂದಿದೆ .
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ
ಗೌಡಗೆರೆ ಗ್ರಾಮದ ಚಂದ್ರಪ್ಪ ನಾಯಕನಹಟ್ಟಿ ಪಟ್ಟಣದ ಗ್ರಾಮ ಒನ್
ಕೇಂದ್ರದಲ್ಲಿ28/7/2023 ರಂದು ಬೆಳೆ ವಿಮೆ ಪಾವತಿ ಮಾಡಲು ಎಲ್ಲಾ
ಅಗತ್ಯ ದಾಖಲೆಗಳೊಂದಿಗೆ ವಿಮೆ ಹಣ ತುಂಬಲು ಹೋಗಿದ್ದಾರೆ.
ಕಂಪ್ಯೂಟರ್ ಆಪರೇಟ್ ರೈತರಿಂದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ,
ಎಫ್ ಐಡಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು ಪ್ರೀಯಂ
ಕಟ್ಟಿಸಿಕೊಳ್ಳುವಾಗ ಕಂಪ್ಯೂಟರ್ ಆಟರೇಟ ಎಂಟ್ರಿ ಮಾಡುವಾಗ
ರೈತನ ಪಹಣಿ 86 ರೀ ಸಂ ನಂ 5.12 ಗುಂಟೆ ಎಂಟ್ರಿ ಮಾಡುವ
ಬದಲು89/*1ಸಿ ಎಂದು ಬೇರೆಯವರ ಪಹಣಿ ನಂಬರ್ ಎಂಟ್ರಿ
ಮಾಡಿರುತ್ತಾರೆ.
ಅದೇ ರೈತ ಚಂದ್ರಪ್ಪ8/8 ಒಂದು ಎಕೆರೆ ಬೆಳೆವಿಮೆ
ಕಟ್ಟಿದ್ದರು 12 ಸಾವಿರ ಬೆಳೆವಿಮೆ ಪರಿಹಾರ ಖಾತೆಗೆ ಬಂದಿದೆ ಮತ್ತೊಂದು
ಸರ್ವೆ ನಂಬರ್ ಕೋಡ್ ನಮೂದಿಸಿದರೆ 12 ಸಾವಿರ ರೂ ತೋರಿಸುತ್ತದೆ ಮತ್ತೆ
ಅದನ್ನು ಪರಿಶೀಲನೆ ಮಾಡಿದಾಗ ಪಹಣಿ ನಂಬರ್ 86 ಎಂಟ್ರಿ ಮಾಡುವ
ಬದಲು 89 ಎಂದು ತಪ್ಪು ಸರ್ವೆ ಬಂಬರ್ ಎಂಟ್ರಿ ಮಾಡಿದ್ದರು ಎರಡು
ಎಂಟ್ರಿಯಾಗಿರುವುದರಿಂದ ಇದು ನಕಲಿಯೋ ಅಥವಾ ಅಸಲಿಯೋ
ಎಂಬ ಅನುಮಾನಕ್ಕೆ ಎಡೆ ಮಾಡಿದೆ.
ಬೆಳೆ ವಿಮೆ ರೈತರ ಖಾತೆಗೆ ಬಿದ್ದಾಗ ನನಗೆ ಒಂದು ಎಕರೆಗೆ ಕಟ್ಟಿದ ಹಣ
ಬಂದಿದೆ ಐದು ಎಕರೆಗೆ ಕಟ್ಟಿರುವ ಹಣ ಬಂದಿಲ್ಲ ಎಂದು ಕೃಷಿ ಇಲಾಖೆ
ಅಧಿಕಾರಿಗಳ ಬಳಿ ತಪಸಣೆ ಮಾಡಿದಾಗ ಕಂಪ್ಯೂಟರ್ ಆಪರೇಟರ್
ತಪ್ಪು ಮಾಡಿರುವುದು ಬಯಲಾಗಿದ್ದು ಇದರಿಂದ ಎಕರೆಗೆ 12 ಸಾವಿರ
ಬಂದಿದ್ದು 5.7 ಗುಂಟೆಗೆ ಕಟ್ಟಿರುವಣ 60 ಸಾವಿರಕ್ಕೂ ಹೆಚ್ಚು ಹಣ
ಬರಬೇಕಿತ್ತು ಇದರಿಂದ ಆತಂಕಗೊಂಡ ವೃದ್ಧ ರೈತ ಒಂದು ವಾರದಿಂದ
ಕೃಷಿ ಇಲಾಖೆ ಹಾಗೂ ನಾಯಕನಹಟ್ಟಿ ಗ್ರಾಮ ಒನ್ ಕೇಂದ್ರಕ್ಕೆ
ಅಲೆದಾಡಿದರೂ ನ್ಯಾಯಮಾತ್ರಿ ಸಿಕ್ಕಿಲ್ಲ.
ಈಗಾಗಲೆ ರೈತರು ಬಿತ್ತನೆ ಮಾಡಿದ ಬೆಳೆಗಳು ಸಕಾಲಕ್ಕೆ ಮಳೆ ಇಲ್ಲದೆ
ಬೆಳೆ ವಿಫಲವಾಗಿದ್ದು ಪ್ರಧಾನ ಮಂತ್ರಿ ಸುರಕ್ಷಾ ಬೆಳೆ ವಿಮೆ
ಯೋಜನೆಯಡಿಯಲ್ಲಿ2280.14 ರೂ ಬೆಳೆವಿಮೆಯ ಪ್ರೀಮಿಯಂ
ಮೊತ್ತವನ್ನು ಕಟ್ಟಿದ್ದರು ಕಂಪ್ಯೂಟರ್ ಆಪರೇಟರ್ ಮಾಡಿದ
ಯಡವಟ್ಟಿನಿಂದ ಬೆಳೆ ವಿಮೆ ಕಟ್ಟಿದರೂ ಸಹ 60 ಸಾವಿರಕ್ಕೂ ಹೆಚ್ಚು
ಮೊತ್ತದಿಂದ ವಂಚನೆಯಾಗಿದ್ದು ಕೂಡಲೆ ಸಂಬಂಧಪಟ್ಟ
ಅಧಿಕಾರಿಗಳು ಪರಿಶೀಲನೆ ಮಾಡಿ ಬೆಳೆವಿಮೆಯಿಂದ ವಂಚಿತ ರೈತನಿಗೆ
ನ್ಯಾಯ ಕೊಡಿಸುವರೇ ಕಾದು ನೋಡ ಬೇಕಿದೆ.