ಚಳ್ಳಕೆರೆ ನ್ಯೂಸ್ :
ಮಂಗಗಳ ಹಾವಳಿಯಿಂದ ಬೆಸ್ತು ಬಿದ್ದ ರೋಗಿಗಳು
ಹೌದು
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿರಬೇಕು, ಆದರೆ ಅವರ
ಜೊತೆ ಈಗ ಮಂಗಗಳು ಇರುತ್ತವೆ.
ಮಂಗಳ ಹಾವಳಿ ಜಿಲ್ಲಾಸ್ಪತ್ರೆ
ವಾರ್ಡ್ ಗಳಲ್ಲಿ ಹೆಚ್ಚಾಗಿದೆ. ಮಂಗಗಳ ಹಾವಳಿಯಿಂದ ರೋಗಿಗಳು
ವಾರ್ಡ್ ಗಳಲ್ಲಿರಲು ಭಯ ಭೀತರಾಗಿದ್ದಾರೆ.
ರೋಗಿಗಳಿಗಾಗಿ ಇಟ್ಟ
ಬ್ರೆಡ್ ಹಾಲು ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ
ಸಾಮಾನ್ಯವಾಗಿದೆ.
ಈಗಲಾದರೂ ಜಿಲ್ಲಾಸ್ಪತ್ರೆಯ ಅಧಿಕಾರಿಗಳು
ಮಂಗಗಳ ಹಾವಳಿಯಿಂದ ರೋಗಿಗಳನ್ನು ರಕ್ಷಿಸಬೇಕಿದೆ ಎಂದು ರೋಗಿಗಳು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.