ಜಲ ಜೀವನ ಯೋಜನೆಯಲ್ಲಿ 1ಲಕ್ಷದ 90 ಸಾವಿರ
ಕುಟುಂಬಗಳು ಸೌಲಭ್ಯ ಪಡೆದಿವೆ
ಕೇಂದ್ರದ ಜಲ ಜೀವನ್ ಯೋಜನೆಯಲ್ಲಿ ಚಿತ್ರದುರ್ಗ ಜಿಲ್ಲೆಯ
1 ಲಕ್ಷದ 90 ಸಾವಿರ ಕುಟುಂಬಗಳು, ನಲ್ಲಿಯ ಸಂಪರ್ಕವನ್ನು
ಪಡೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆಎಸ್
ನವೀನ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿದರು.
2019ರಿಂದ ಇಲ್ಲಿಯವರೆಗೆ ನಲ್ಲಿ ಸಂಪರ್ಕದ
ಕೆಲಸ ನಡೆಯುತ್ತಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು
ತಲುಪಿಸುವ ಯೋಜನೆ ಇದಾಗಿದೆ.
ಆದ್ದರಿಂದ ಈ ಯೋಜನೆಯನ್ನು
ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದರು.