ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಬೆಸಿಗೆಯ
ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗಿ ಪ್ರಸ್ತುತ 40
ಡಿಗ್ರಿ ದಾಟಿ ಜನರ ನಿತ್ಯದ ದಿನಚರಿಯನ್ನು ಬಿಸಿಲು ಬದಲಿಸಿದೆ.
ಅದರಂತೆ ಚಳ್ಳಕೆರೆ ತಾಲೂಕು ಬಯಲು ಸೀಮೆ, ಬಿಸಿಲೇನು
ಇಲ್ಲಿನ ಜನರಿಗೆ ಹೊಸದಲ್ಲ. ಆದರೂ ಈ ವರ್ಷದ ಸುಡು
ಬಿಸಿಲು ದಶಕದಲ್ಲಿಯೇ ದಾಖಲೆ ನಿರ್ಮಿಸಿದೆ.
ಮನೆಯಿಂದ
ಜನರು ಹೊರಬರಲು ಹಿಂಜರಿಯುತ್ತಿದ್ದು, ಅನಿವಾರ್ಯತೆ
ಇದ್ದಲ್ಲಿ ಮಾತ್ರ ಮನೆಗಳಿಂದ ಹೊರ ಬಂದು ತಮ್ಮ ಕೆಲಸ
ಮುಗಿಸಿಕೊಂಡು ಮರಳುಬೇಕು ಎಂದು ಆರೋಗ್ಯ ಅಧಿಕಾರಿ ಡಾ.ಕಾಶಿ ಹೇಳಿದ್ದಾರೆ.