ಚಳ್ಳಕೆರೆ ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹೊತ್ತಲ್ಲಿ ಆಪರೇಷನ್ ಗೆ ಇಳಿದ ಕಾಂಗ್ರೆಸ್ : ಲೋಕಸಭಾ ಚುನಾವಣೆ ಹೊತ್ತಲ್ಲಿ ಆಪರೇಷನ್ ಗೆ ಇಳಿದ ಕಾಂಗ್ರೆಸ್

ಹೌದು 2024ರ ಲೋಕಸಭಾ ಚುನಾವಣೆ ಕಾವು ಬಿಸಿಲಿನ ಕಾವು ರಂಗೇರುವಂತೆ ಚುನಾವಣೆ ಕಾವು ಕೂಡ ರಂಗಿರುತ್ತದೆ.

ಅದರಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಎ ಚಂದ್ರಪ್ಪ ಪರವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘಮೂರ್ತಿ ಭರ್ಜರಿಯಾಗಿ ಮತಬೇಟೆ ನಡೆಸುತ್ತಿದ್ದಾರೆ.

ಅದರಂತೆ ಚಳ್ಳಕೆರೆ ಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಬಲೇ ಬೀಸಿದ ಶಾಸಕರು ಕಾರ್ಯಕರ್ತರನ್ನು ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಹಲವಾರು ದಿನಗಳಿಂದ ಲೋಕಸಭಾ ಚುನಾವಣೆ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ಶಾಸಕರು, ಅನ್ಯ ಪಕ್ಷದ ಹಾಗೂ ಸ್ವಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಮತಯಾಚನೆ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಿ ಎಂ ಚಂದ್ರಪ್ಪ ರವರನ್ನು ಬೆಂಬಲಿಸುವಂತೆ ಕೋರಿದ್ದಾರೆ.

ಅದರಂತೆ ನಗರಸಭೆ ಸದಸ್ಯ, ಹಾಗೂ ಜೆಡಿಎಸ್ ಮುಖಂಡ ಪ್ರಶಾಂತ್ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷರಾದಂತ ಹಾಗೂ ಜೆಡಿಎಸ್ ಮುಖಂಡರಾದಂತ ಟಿ ವಿಜಯ್ ಕುಮಾರ್, ,ನಾಗರಾಜ್, ಇನ್ನು ಹಲವು ಮುಖಂಡರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡಿಸುವ ಮೂಲಕ ಲೋಕಸಭಾ ಚುನಾವಣೆ ಕಾಂಗ್ರೇಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ತಿಪ್ಪೇಸ್ವಾಮಿ, ಸುರೇಶ್, ಸಿಟಿ ಶ್ರೀನಿವಾಸ್ , ಪ್ರಭುದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ವೀರಭದ್ರಪ್ಪ, ಶಶಿಧರ್, ಕಾಂಗ್ರೆಸ್ ಮುಖಂಡ ಎಂ ಜೆ ರಾಘವೇಂದ್ರ ಇನ್ನು ಹಲವಾರು ಮುಖಂಡರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!