ಚಳ್ಳಕೆರೆ : ಮತಗಟ್ಟೆಗೆ ಬಂದ ಮತದಾರರ ವಿಳಾಸ ಪರೀಕ್ಷಿಸಿ ತದನಂತರ ಅವರಿಗೆ ಮತದಾನ ಮಾಡಲು ಅವಕಾಶ ಕೊಡಿ ಎಂದು ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿಯಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದರು.
ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024 ರ ಲೋಕಸಭಾ ಚುನಾವಣೆ ಅಂಗವಾಗಿ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು,
ಇದೇ ಸಂಧರ್ಭದಲ್ಲಿ ಸುಮಾರು 601 ಸಿಬ್ಬಂದಿ ಮತಗಟ್ಟೆ ತರಬೇತಿ ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್, ಜಿಲ್ಲಾ ಚುನಾವಣೆ ಕೋಶದ ನೋಡೆಲ್ ಅಧಿಕಾರಿ ಜಗದೀಶ್ ಹೆಬ್ಬಳಿ, ಸಹಾಯಕ ತರಬೇತಿ ನೋಡೆಲ್ ಅಧಿಕಾರಿ ನಾಗೇಂದ್ರ ಚೌದ್ರಿ, ಡಿವೈಎಸ್ ಪಿ ಬಿಟಿ.ರಾಜಣ್ಣ, ತಹಶಿಲ್ದಾರ್ ರೇಹಾನ್ ಪಾಷ, ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್, ಪೌರಾಯುಕ್ತ ಕೆ.ಜೀವನ್ ಕಟ್ಟಿಮನಿ, ತಾಪಂ.ಸಹಾಯಕ ನಿದೇರ್ಶಕ ಸಂತೋಷ್, ಇನ್ನೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಜರಿದ್ದರು,