ನಾಯಕನಹಟ್ಟಿ::ಏ.6. ನಿಮ್ಮ ಮತದಾನದಿಂದ ದೇಶದ ಬಹುಶಃ ಅಡಗಿದೆ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಪಿಡಿಓ ಟಿ.ರಾಜಣ್ಣ ಹೇಳಿದ್ದಾರೆ.
ಅವರು ಶನಿವಾರ ಹೋಬಳಿ ನಲಗೇತನಹಟ್ಟಿ ಗ್ರಾಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯ 2024ರ ಅಂಗವಾಗಿ ತಾಲೂಕು ಪಂಚಾಯಿತಿ ಮತ್ತು ನಲಗೇತನಹಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ. ಮತಗಟ್ಟೆಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಈ ತಿಂಗಳ ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತಾಗಬೇಕು ಎಂದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಕೆಂಚಪ್ಪ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮುಸ್ಟೂರಪ್ಪ, ಗ್ರಾಮಸ್ಥರಾದ ಜಿ ಸಿ ಗೌಡ್ರು ಬೋರಯ್ಯ, ತಿಪ್ಪನ ಬೋರಯ್ಯ, ಜಿ ಎಸ್ ಪ್ರಹ್ಲಾದ್, ಪಿ ಬಿ ಚನ್ನಕೇಶವಯ್ಯ, ರಾಘವೇಂದ್ರ. ಅಂಗನವಾಡಿ ಶಿಕ್ಷಕಿಯರಾದ ಬಿ ಬೋರಮ್ಮ, ಸಿ ಬಿ ಚಂದ್ರಮತಿ. ಈ ಎಸ್ ರಮ್ಯಾ, ಸುಧಾ,
ಎನ್ ಆರ್ ಎಲ್ ಎಂ.ತಂಡದ ಗಾಯತ್ರಿ, ಭವ್ಯ, ಲಕ್ಷ್ಮಿ, ಇದ್ದರು.