ಚಳ್ಳಕೆರೆ : ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಖಾಸಗಿ ಮನೆಯೊಂದರಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಬಡ ಜನರ ಬಾಳಿಗೆ ಬೆಳಕು ಹಾಗಿದೆ ಆದ್ದರಿಂದ ನಮ್ಮ ಕಾಂಗ್ರೇಸ್ ಪಕ್ಷ ತಂದ ಗ್ಯಾರಂಟಿ ಯೋಜನೆಗಳು ಜನರಿಗೆ ವರದಾನವಾಗಿದೆ, ಆದ್ದರಿಂದ ಈ ಬಾರಿ ನಮ್ಮ ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಬಿಎನ್.ಚಂದ್ರಪ್ಪ ಮತ ನೀಡಿ ದೇಶದ ಅಭಿವೃದ್ದಿ ಕಾಣಿ ಎಂದರು.
ಇAದು ಈಡೀ ದೇಶದಲ್ಲಿ ಸುಮಾರು ವರ್ಷಗಳ ಇತಿಹಾಸ ಇರುವ ನಮ್ಮ ಕಾಂಗ್ರೇಸ್ ಪಕ್ಷ ಬಡ ಜನರ ಏಳಿಗೆಗೆ ಸ್ಪಂಧಿಸುತ್ತಾ ಬಂದಿದ್ದೆ ಆದ್ದರಿಂದ ನಮ್ಮ ಭರಸವೆಯ ನಾಯಕ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿ ದೇಶದ ಅಭಿವೃದ್ದಿಗೆ ಎಲ್ಲಾರು ಕೈ ಜೋಡಿಸಬೇಕು ಎಂದರು ಕರೆ ನೀಡಿದರು.
ಇನ್ನೂ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಕೋಟಿಗಳ ಅನುದಾನವನ್ನು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮಧ್ಯ ಕರ್ನಾಟಕ ಜಿಲ್ಲೆಯ ಚಳ್ಳಕೆರೆಗೆ ವಿಶೇವಾದ ಕಾಳಜಿಯಿಂದ ನೀರಾವರಿ ಪ್ರದೇಶ ಮಾಡಲು ವಾಣಿವಿಲಾಸ ಸಾಗರದಿಂದ ವೇದಾವತಿ ನದಿ ಪಾತ್ರದ ಮೂಲಕ ಕುಡಿಯುವ ನೀರನ್ನು 0.25 ಟಿಎಂಸಿ ನೀರನ್ನು ಬಿಡಲು ನಮ್ಮ ಪಕ್ಷ ಕಾರಣವಾಗುತ್ತದೆ, ಇನ್ನೂ ವೇದವಾತಿ ನದಿ ಭಾಗದಲ್ಲಿ ಸುಮಾರು 6ಬ್ಯಾರೇಜ್‌ಗಳನ್ನು ನಿರ್ಮಾಸಿದ ಕಿರ್ತಿ ನಮಗೆ ನಮ್ಮ ಪಕ್ಷಕ್ಕೆ ಸಲ್ಲುತ್ತದೆ, ಕ್ಷೇತ್ರದಲ್ಲಿ ಬಡ ಜನರಿಗೆ ಮನೆಗಳ ನಿರ್ಮಾಣ, ಮೂಲ ಭೂತ ಸೌಲಭ್ಯ ಈಗೇ ಹಲವು ಯೋಜನೆಗಳ ಮೂಲಕ ಈ ಎಲ್ಲಾ ಯೋಜನೆಗಳನ್ನು ಮತದಾರರ ಕಣ್ಣಮುಂದೆ ಇವೆ.
ಇವುಗಳನ್ನು ಸೂಕ್ಷö್ಮವಾಗಿ ಗಮನಿಸಿದ ಮತದಾರರು ಈ ಬಾರಿ ಕಾಂಗ್ರೇಸ್ ಪಕ್ಷ ಕೈ ಬಲಪಡಿಸುತ್ತಾರೆ ಚಂದ್ರಪ್ಪರನ್ನು ಆಯ್ಕೆ ಮಾಡುತ್ತಾರೆ, ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.
ನುಡಿದAತೆ ನಡೆಯುವ ಸರಕಾರ ಐದು ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿಗರ ಟೀಕೆ ಟಿಪ್ಪಣಿಗಳಿಗೆ ಮಣಿಹಾಕುವುದಿಲ್ಲ, ಜನರ ನೋವುಗಳಿಗೆ ಬದ್ದರಾಗಿದ್ದೆವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ, ಪಕ್ಷಬೇದ ಮರೆತು ಬಡವರಿಗೆ ಇದು ವರದಾನವಾಗಿದೆ. ಯುವನಿಧಿ, ಗೃಹಲಕ್ಷಿö್ಮÃ ಯೋಜನೆ, ಶಕ್ತಿ ಯೋಜನೆ, ನಿರುದ್ಯೋಗನಿಧಿ, ಉಚಿತ ವಿದ್ಯುತ್ ಈಗೇ ನಮ್ಮ ಗ್ಯಾರಂಟಿ ಯೋಜನೆಗಳು ಮೂಲಕ ಜನರ ಬಳಿಗೆ ಸರಕಾರ ಕೊಂಡುಯ್ಯುವ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಒಬ್ಬರು ಎಂದರು.

ಹೇಳಿಕೆ :
ಕ್ಷೇತ್ರದಲ್ಲಿ ಬರಗಾಲ ಅವರಿಸಿದೆ ಆದ್ದರಿಂದ ಕುಡಿಯುವ ನೀರು, ದನಕರುಗಳಿಗೆ ಮೇವು ಈಗೇ ಸಂಬAದಿಸಿದAತೆ ಗೋಶಾಲೆ ತೆರೆದಿದೆ. ಇನ್ನೂ ಗ್ರಾಮವಾರು ಗೋಶಾಲೆ ತೆರೆಯಲು ಮನವಿ ಮಾಡಲಾಗಿದೆ, ಇನ್ನೂ ಕುಡಿಯುವ ನೀರಿಗೆ ತೊಂದರೆಯಾಗದAತೆ ಟ್ಯಾಂಕರ್ ನೀರು, ಕೊಡಲಾಗುತ್ತದೆ.
— ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ

ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೀರಭದ್ರಪ್ಪ, ಶಶಿಧರ್, ಸಿ.ಬಾಬು, ಪ್ರಸನ್ನ ಕುಮಾರ್, ನೇತಾಜಿ ಪ್ರಸನ್ನ ಕುಮಾರ್, ಪ್ರಭುದೇವ್, ಇತರರು ಇದ್ದರು.

Namma Challakere Local News
error: Content is protected !!