ಚಳ್ಳಕೆರೆ ನ್ಯೂಸ್ : ಚುನಾವಣೆಯಲ್ಲಿ ಅಕ್ರಮ ಎಸಗದಂತೆ ಅಧಿಕಾರಿಗಳು ಚೆಕ್‌ಪೋಸ್ಟ್ ಗಳಲ್ಲಿ ತನಿಖೆ ಕೈಗೊಳ್ಳಬೇಕು, ಇನ್ನೂ ಚುನಾವಣೆ ಸಮಿಸುತ್ತಿದೆ ಇಂತಹ ಸಮಯದಲ್ಲಿ ಅಧಿಕಾರಿಗಳು ಸನ್ನದರಾಗಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದರು.
ಅವರು ತಾಲೂಕು ಕಛೇರಿಯಲ್ಲಿ ಎಪ್ ಎಸ್ ಟಿ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು, ಇನ್ನೂ ಮತದಾನ ಮುಗಿಯುವವರೆಗೂ ಚೆಕ್‌ಪೋಸ್ಟ್ ಗಳಲ್ಲಿಹದ್ದಿನ ಕಣ್ಣು ಇಟ್ಟಿರಬೇಕು, ನೆಪಮಾತ್ರಕ್ಕೆ ಚುನಾವಣೆಯಲ್ಲಿ ಕೆಲಸ ಮಾಡುವಾಗಿಲ್ಲ,ಇನ್ನೂ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಕೆಲಸ ಹಾಗಬೇಕು ಎಂದರು.
ತಹಶಿಲ್ದಾರ್ ರೇಹಾನ್ ಪಾಷ, ಮಾತನಾಡಿದರು, ಇನ್ನೂ ಜೊತೆಯಲ್ಲಿ ಎಲ್ಲಾ ಅಧಿಕಾರಿಗಳು ಇತರರು ಹಾಜರಿದ್ದರು.