ಚಳ್ಳಕೆರೆ ನ್ಯೂಸ್ : ತಾಲೂಕಿನಲ್ಲಿ ಬರಗಾಲವಿದೆ ಆದ್ದರಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬರಗಾಲ ಪೀಡಿತ ಪ್ರದೇಶಗಳಲ್ಲಿ ಬರಗಾಲಕ್ಕೆ ಸಂಬಂದಿಸಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು,
ಈಗಾಗಲೇ ಸಮಸ್ಯೆ ಇರುವ ಸುಮಾರು 22 ಗ್ರಾಮಗಳಲ್ಲಿ ಖಾಸಗಿ ಬೋರ್ ವೆಲ್ ಹಾಗೂ ಇತರೆ ಮೂಲಗಳಿಂದ ಕುಡಿಯುವ ನೀರು ಪಡೆಯಲು ಅವಕಾಶ ಮಾಡಿದೆ..
ಇನ್ನೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಅನುದಾನ ಸಾಕಿಷ್ಟಿದೆ ನಿಮ್ಮ ನಿಮ್ಮ ವ್ಯಾಪ್ತಿಯ ಖಾಸಗಿ ಬೋರ್ ವೆಲ್ ಗುರುತಿಸಿ ನೀರು ಪಡೆಯಿರಿ, ಇಲ್ಲ ಹೊಸದಾಗಿ ಬೊರ್ ವೆಲ್ ಹಾಕಿಸಿನೀರು ಕೊಡಿ ಒಟ್ಟಾರೆ ಯಾರು ಕೂಡ ನೀರಿಲ್ಲದೆ ಅಲೆಯಬಾರದು ಎಂದರು.
ಇನ್ನೂ ತಾಪಂ ಇಒ.ಲಕ್ಷ್ಮಣ್ ಮಾತನಾಡಿ, ತಾಲೂಕಿನ ಸುಮಾರು40 ಗ್ರಾಮ ಪಂಚಾಯತ್ ನಲ್ಲಿ ಈಗಾಗಲೇ ಪಿಡಿಓ ಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ, ನಿಮ್ಮ ನಿಮ್ಮ ವ್ಯಾಪ್ತಿಯ ಗ್ರಾಮದಲ್ಲಿ ಕುಡಿಯುವ ನೀರಿಲ್ಲ ಎಂದು ಚುನಾವಣೆಗೆ ಅಡೆತಡೆಮಾಡುವುದು ಇನ್ನು ಸುಖಾಸುಮ್ಮನೆ ನಿರ್ಲಕ್ಷ್ಯ ತೋರುವುದು ಸಹಿಸುವುದಿಲ್ಲ, ಈಗಾಗಲೇ ಮೊದಲ ಅಂಗವಾಗಿ ಟ್ಯಾಂಕರ್ ನೀರು ಕೊಡಿ ನಂತರ ಖಾಸಗಿ ಬೋರ್ ವೆಲ್ ನೀರು ಕೊಡಿ, ನಂತರ ಶಾಶ್ವತ ಬೊರ್ ವೆಲ್‌ಕೊರಿಸಿ ನೀರುಕೊಡಿ, ಟ್ಯಾಂಕರ್ ನೀರು ಕೊಡುವಾಗ ಕಡ್ಡಾಯ ವಾಗಿ ಜಿಪಿಎಸ್ ಪೋಟೋ ಹಾಕಬೇಕು, ಎಂದರು.
ತಾಂತ್ರಿಕ ಸಹಾಯಕರು ಮತ್ತು ಪದನಿಮಿತ್ತ ಭೂದಾಖಲೆಗಳ ಉಪ
ನಿರ್ದೇಶಕರು, ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿ ರಾಮಾಂಜನೇಯ ಮಾತನಾಡಿ, ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದ್ದು ತಾಲೂಕು
ಬರಗಾಲ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲ್ಲೂಕುಗಳಲ್ಲಿನ ಗ್ರಾಮಗಳಲ್ಲಿ ಜನ
ಜಾನುವಾರುಗಳಿಗೆ
ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಉಂಟಾಗದಂತೆ ಅಗತ್ಯ
ಕ್ರಮಗಳನ್ನು ಕೈಗೊಳ್ಳಬೇಕು,
ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು
ಪ್ರಾರಂಭಿಸಲಾಗಿರುವ ಗೋಶಾಲೆಗಳ
ನಿರ್ವಹಣೆ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಇಓ ಲಕ್ಷ್ಮಣ್, ಬಿಇಓ ಕೆಎಸ್.ಸುರೇಶ್, ಕುಡಿಯುವ ನೀರು ಇಲಾಖೆ ದಯಾನಂದ್, ಪಶು ಸಂಗೋಪನೆ ಇಲಾಖೆ ಡಾ.ರೇವಣ್ಣ, ದಿವಕಾರ್, ಶಿರಸ್ತೆದಾರ್ ಬಿ.ಶಕುಂತಲಾ, ಲಿಂಗೇಗೌಡ, ಇತರ ಅಧಿಕಾರಿಗಳು, ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓ ಗಳು ಪಾಲ್ಗೊಂಡಿದ್ದರು.