ನಾಯಕನಹಟ್ಟಿ:: ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಜನರ ದಾಹ ತಣಿಸಲು ಅರವಟ್ಟಿಗೆ ತೆರೆದಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನರುಸರುಲ್ಲಾ ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಆಟೋ ನಿಲ್ದಾಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಉಚಿತವಾಗಿ ಕುಡಿಯುವ ನೀರನ್ನು ಒದಗಿಸಲು ಅರವಟ್ಟಿಗೆಯನ್ನು ತೆರೆದಿದ್ದು ಅದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಒಳಮಠದ ದೇವಸ್ಥಾನದ ಮುಂಭಾಗದಲ್ಲಿ ಮತ್ತು ಪಾದಗಟ್ಟೆ. ವಾಲ್ಮೀಕಿ ವೃತ್ತದ ಆಟೋ ನಿಲ್ದಾಣದಲ್ಲಿ ಸೇರಿದಂತೆ ಪಟ್ಟಣದ ಐದು ಭಾಗದಲ್ಲಿ ಉಚಿತವಾಗಿ ಕುಡಿಯುವ ನೀರನ್ನು ಒದಗಿಸಲು ಅರವಟ್ಟಿಗೆ ತೆರೆದಿದೆ ಮುಖ್ಯರಸ್ತೆಯ ಅವಧಿ ತಾತ್ಕಾಲಿಕ ಹೆಡ್ ನೇಮಿಸಿಕೊಂಡು ಆ ಶೆಡ್ಡು ಒಳಗೆ ಮೂರರಿಂದ ನಾಲ್ಕು ಮರಳಿನ ರಾಶಿ ಮಾಡಿ ಆ ರಾಶಿಯ ಮೇಲೆ 20 ರಿಂದ 25 ಲೀಟರ್ ನೀರು ಸಂಗ್ರಹದ ಹೊಸ ಮಣ್ಣಿನ ಮಡಿಕೆಯನ್ನು ಇಡಲಾಗಿದೆ.
ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ದ್ವಿತೀಯ ದರ್ಜೆ ಸಹಾಯಕ ಎಂ ಎಸ್ ಸುರೇಶ್, ಟಿ ತಿಪ್ಪೇಸ್ವಾಮಿ, ಹೆಲ್ತ್ ಇನ್ಸ್ಪೆಕ್ಟರ್ ತಿಪ್ಪೇಶ್, ಗುಡ್ಡದಯ್ಯ, ಮಧು, ಸೇರಿದಂತೆ ಪೌರಕಾರ್ಮಿಕರು ಇದ್ದರು

Namma Challakere Local News
error: Content is protected !!