ಚಳ್ಳಕೆರೆ ನ್ಯೂಸ್ : ಬರಗಾಲ ಪೀಡಿತ ಪ್ರದೇಶಗಳಲ್ಲಿ ಬರಗಾಲಕ್ಕೆ ಸಂಬಂದಿಸಿದ
ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಈದೇ ಏಪ್ರಿಲ್ 3 ರಂದು ತಾಲೂಕು ಪಂಚಾಯತ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ತಹಶಿಲ್ದಾರ್ ರೇಹಾನ್ ಪಾಷ ಮಾಧ್ಯಮದೊಟ್ಟಿಗೆ ಮಾಹಿತಿ ನೀಡಿದ್ದಾರೆ.
ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದ್ದು ತಾಲೂಕು
ಬರಗಾಲ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ
ಕರೆಯಲಾಗಿದ್ದು, ತಾಲ್ಲೂಕುಗಳಲ್ಲಿನ ಗ್ರಾಮಗಳಲ್ಲಿ ಜನ
ಜಾನುವಾರುಗಳಿಗೆ
ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಉಂಟಾಗದಂತೆ ಅಗತ್ಯ
ಕ್ರಮಗಳನ್ನು ಕೈಗೊಂಡಿರುವ
ಬಗ್ಗೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು
ಪ್ರಾರಂಭಿಸಲಾಗಿರುವ ಗೋಶಾಲೆಗಳ
ನಿರ್ವಹಣೆ ಬಗ್ಗೆ ಹಾಗೂ ಬರ ಪರಿಹಾರ ನಿರ್ವಹಣೆ ಬಗ್ಗೆ
ತಾಂತ್ರಿಕ ಸಹಾಯಕರು ಮತ್ತು ಪದನಿಮಿತ್ತ ಭೂದಾಖಲೆಗಳ ಉಪ
ನಿರ್ದೇಶಕರು, ಚಿತ್ರದುರ್ಗ ಇವರನ್ನು
ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿ ರಾಮಾಂಜನೇಯ ರನ್ನು ನೇಮಕ ಮಾಡಲಾಗಿದ್ದು,
ಇವರ
ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು ಅಧಿಕಾರಿಗಳು ಸಭೆಗೆ
ಹಾಜರಿಯಾಗುವಂತೆ ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.